ಬ್ಲೂವೇಲ್‍ಗೆ 12 ವರ್ಷದ ಬಾಲಕ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Blue-whale

ಲಖ್ನೋ, ಸೆ.23- ಅತ್ಯಂತ ಅಪಾಯಕಾರಿ ಆನ್‍ಲೈನ್ ಗೇಮ್ ಬ್ಲೂವೇಲ್‍ಗೆ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. 12 ವರ್ಷದ ಈ ವಿದ್ಯಾರ್ಥಿಯ ಶವ ರೈಲ್ವೆ ಹಳಿ ಪಕ್ಕದಲ್ಲಿ ಪತ್ತೆಯಾಗಿದ್ದು, ಬ್ಲೂವೇಲ್ ಸವಾಲನ್ನು ಸ್ವೀಕರಿಸಿ ಈತ ಪ್ರಾಣ ಕಳೆದುಕೊಂಡಿದ್ದಾನೆ ಎಂದು ಶಾಲೆಯಲ್ಲಿನ ಸಹಪಾಠಿಗಳು ಹೇಳಿದ್ದಾರೆ. ಉತ್ತರ ಪ್ರದೇಶದ ಶಾಮ್ಲಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ರಷ್ಯಾ ಮೂಲದ ಬ್ಲೂವೇಲ್ ಆನ್‍ಲೈನ್ ಗೇಮ್ ಅಥವಾ ಬ್ಲೂವೇಲ್ ಚಾಲೆಂಜ್ ಈಗಾಗಲೇ ದೇಶದ ಅನೇಕ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಮತ್ತು ಬಾಲಕರನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ.

Facebook Comments

Sri Raghav

Admin