ಸೊಳ್ಳೆ ಓಡಿಸಲು ಆ ದೇವರೇ ಬರಬೇಕು : ಅಸಹಾಯಕತೆ ತೋಡಿಕೊಂಡ ಸುಪ್ರೀಂಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

supreme-ocurt

ನವದೆಹಲಿ, ಸೆ.23-ನಾವೇನು ದೇವರಲ್ಲ. ಸೊಳ್ಳೆ ಓಡಿಸಲು ಆ ದೇವರೇ ಬರಬೇಕು. ದೇವರು ಮಾಡುವ ಕೆಲಸವನ್ನು ನಮಗೆ ಮಾಡುವಂತೆ ಹೇಳಬೇಡಿ ಎಂದು ಸರ್ವೋಚ್ಚ ನ್ಯಾಯಾಲಯವೇ ಒಂದು ವಿಚಿತ್ರ ಪ್ರಕರಣದಲ್ಲಿ ತನ್ನ ಅಸಹಾಯಕತೆಯನ್ನು ತೋಡಿಕೊಂಡ ಪ್ರಸಂಗ ನಡೆದಿದೆ. ಕೆಲವು ತಕರಾರುಗಳ ವಿಷಯ ಬಂದಾಗ ಸುಪ್ರೀಂಕೋರ್ಟ್ ಕೂಡ ಏನೂ ಮಾಡಲಾಗದಂಥ ಪರಿಸ್ಥಿತಿ ಉದ್ಭವಿಸುತ್ತದೆ. ನಿನ್ನೆ ತಮ್ಮ ಮುಂದೆ ಬಂದ ಒಂದು ಮನವಿ ವಿಚಾರದಲ್ಲಿ ಆಗಿದ್ದೂ ಇದೆ. ಆಷ್ಟಕ್ಕೂ ಆ ವ್ಯಕ್ತಿ ಮಾಡಿದ ಮನವಿ ಏನು ? ಈ ಜಗತ್ತಿನ ಅತ್ಯಂತ ಅಪಾಯಕಾರಿ ಜೀವಿಗಳಾದ ಸೊಳ್ಳೆಗಳನ್ನು ಭಾರತದಿಂದ ಮತ್ತು ಈ ಜಗತ್ತಿನಿಂದಲೇ ಓಡಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ದಾನೇಶ್ ಲೇಶಧನ್ ಸರ್ವೋನ್ನತ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ವಿಚಿತ್ರ ಅಪೀಲಿನ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕೂರ್ ಮತ್ತು ದೀಪಕ್ ಗುಪ್ತಾ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠ, ಸೊಳ್ಳೆಗಳನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ. ಇದು ನಮ್ಮಿಂದ ಆಗುವ ಕೆಲಸವಲ್ಲ. ಇದಕ್ಕೆ ದೇವರೇ ಬರಬೇಕು ಇಂಥ ವಿಚಾರಗಳನ್ನು ನಮ್ಮ ಮುಂದೆ ತರಬೇಡಿ ಎಂದರು.  ವಿಶ್ವಾದ್ಯಂತ ವರ್ಷಕ್ಕೆ 7.25 ಲಕ್ಷ ಜನರನ್ನು ಕೊಲ್ಲುವ ಸೊಳ್ಳೆಗಳನ್ನು ನಿಯಂತ್ರಿಸುವುದು ವಿಜ್ಞಾನಿಗಳು ಹಾಗೂ ಸಾರ್ವಜನಿಕ ಆರೋಗ್ಯ ತಜ್ಞರಿಗೂ ದೊಡ್ಡ ಸವಾಲು ಆಗಿರುವಾಗ ಈ ವಿಷಯದಲ್ಲಿ ನ್ಯಾಯಾಲಯದ ಮಧ್ಯಪ್ರವೇಶಕ್ಕೆ ದಾನೇಶ್ ಮನವಿ ಮಾಡಿದ್ದರು.

Facebook Comments

Sri Raghav

Admin