ಅರಬ್ಬಿ ಸಮುದ್ರದಲ್ಲಿ ಪಾಕ್ ನೌಕಾನಿಗ್ರಹ ಕ್ಷಿಪಣಿ ಪ್ರಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Pak--1

ಇಸ್ಲಾಮಾಬಾದ್, ಸೆ.25-ಭಾರತ-ಪಾಕಿಸ್ತಾನ ಗಡಿಭಾಗದಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಗೊಂಡು ಎರಡೂ ದೇಶಗಳ ಸಂಬಂಧ ಮತ್ತಷ್ಟು ಹದಗೆಟ್ಟಿರುವಾಗಲೇ, ಪಾಕ್ ನೌಕಾಪಡೆ ನಿನ್ನೆ ನೌಕಾ ನಿಗ್ರಹ ಕ್ಷಿಪಣಿಯೊಂದನ್ನು ಅರಬ್ಬಿ ಸಮುದ್ರದಲ್ಲಿ ಪ್ರಯೋಗಿಸಿದೆ. ಅದು ನಿಖರ ಗುರಿಗೆ ಅಪ್ಪಳಿಸಿದೆ.ಇದು ಪಾಕಿಸ್ತಾನದ ಸಮರಸಿದ್ಧತೆಯನ್ನು ತೋರಿಸಿದೆ ಎಂದು ಸೇನಾಪಡೆಯ ಮುಖ್ಯಸ್ಥ ಆಡ್ಮಿರಲ್ ಮಹಮದ್ ಝಕಾವುಲ್ಲಾ ಹೇಳಿದ್ದಾರೆ.  ನೌಕಾಪಡೆಯ ಸೀ ಕಿಂಗ್ ಹೆಸರಿನ ಹೆಲಿಕಾಪ್ಟರ್ ಗಗನದಿಂದ ಸಮನಾಂತರವಾಗಿ ಮೇಲ್ಮೈ ಮೇಲೆ ಹಾರುವ ಕ್ಷಿಪಣಿಯೊಂದನ್ನು ಉಡಾಯಿಸಿತು. ಅದು ತನ್ನ ಗುರಿಗೆ ನಿಖರವಾಗಿ ಅಪ್ಪಳಿಸಿತು ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin