ಟರ್ಕಿಯಲ್ಲಿ ಸಿರಿಯಾ ನಾಯಕಿ ಮತ್ತು ಅವರ ಪುತ್ರಿಯ ಭೀಕರ ಹತ್ಯೆ
ಇಸ್ತಾನ್ಬುಲ್(ಟರ್ಕಿ), ಸೆ.24-ಸಿರಿಯಾ ಹಿರಿಯ ಪ್ರತಿಪಕ್ಷ ನಾಯಕಿ ಮತ್ತು ಅವರ ಪುತ್ರಿಯನ್ನು ಟರ್ಕಿಯ ಇಸ್ತಾನ್ಬುಲ್ನ ಅಪಾರ್ಟ್ಮೆಂಟ್ನಲ್ಲಿ ಭೀಕರವಾಗಿ ಕೊಲ್ಲಲಾಗಿದೆ. 1980ರಿಂದಲೂ ಸಿರಿಯಾದ ಆಡಳಿತಾರೂಢ ಬಾತ್ ಪಕ್ಷದ ವಿರೋಧಿಯಾಗಿರುವ ಒರೂಬಾ ಬರಾಕತ್ ಮತ್ತು ಅವರ ಎಕೈಕ ಪುತ್ರಿ, ಪತ್ರಕರ್ತೆ ಹಲಾಲ ಬರಾಕತ್ ಅವರ ಮೃತದೇಹಗಳು ಪತ್ತೆಯಾಗಿದ್ದು, ಇಬ್ಬರ ಕುತ್ತಿಗೆ ಭಾಗಗಳಲ್ಲಿ ಆಳವಾದ ಇರಿದ ಗಾಯಗಳಾಗಿವೆ.
ಫೋನ್ ಕರೆಗೆ ತಾಯಿ ಮತ್ತು ಮಗಳು ಉತ್ತರಿಸದಿದ್ದಾಗ, ಸಂಶಯಗೊಂಡ ಬಂಧುಮಿತ್ರರು ಪೊಲೀಸರಿಗೆ ಮಾಹಿತಿ ನೀಡಿದರು. ಇಸ್ಲಾನ್ಬುಲ್ ಸನಿಹದ ಉಸ್ಕುಡಾರ್ ಪ್ರದೇಶದ ಅಪಾರ್ಟ್ಮೆಂಟ್ಗೆ ಆಗಮಿಸಿ ಪೊಲೀಸರು ಪರಿಶೀಲಿಸಿದಾಗ ಅವರು ಕೊಲೆಯಾಗಿರುವುದು ಪತ್ತೆಯಾಯಿತು. ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದು, ಹಂತಕರಿಗಾಗಿ ಮಾನವ ಬೇಟೆ ಆರಂಭಿಸಿದ್ದಾರೆ.
Facebook Comments