ನಿಲ್ಲದ ಪಾಕ್ ಸೇನೆಯ ಪುಂಡಾಟ : ಮತ್ತಿಬ್ಬರು ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಜಮ್ಮು, ಸೆ.24-ಕಾಶ್ಮೀರ ಕಣಿವೆಯಲ್ಲಿ ಭಾರತದ ದಿಟ್ಟ ಪ್ರತ್ಯುತ್ತರಗಳ ನಡುವೆಯೂ ಪಾಕಿಸ್ತಾನಿ ಯೋಧರ ಪುಂಡಾಟ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಬಲಾಕೋಟ್ ಸೆಕ್ಟರ್‍ನ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭಾರತೀಯ ಮುಂಚೂಣಿ ನೆಲೆಗಳ ಮೇಲೆ ಪಾಕ್ ಯೋಧರು ಕದನ ವಿರಾಮ ಉಲ್ಲಂಘಿಸಿ ಇಂದು ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ.

ಪಾಕಿಸ್ತಾನದ ಈ ಗುಂಡಿನ ದಾಳಿಗೆ ಭಾರತೀಯ ಯೋಧರು ಪರಿಣಾಮಕಾರಿ ಉತ್ತರ ನೀಡಿದರು. ನಂತರ ಸುಮಾರು 30 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆಯಿತು, ನಮ್ಮ ಇಬ್ಬರು ಯೋಧರು ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ಧಾರೆ. ಪಾಕಿಸ್ತಾನವು ಕೆಲವು ದಿನಗಳಿಂದ ಗಡಿಭಾಗದಲ್ಲಿ ನಡೆಸುತ್ತಿರುವ ಶೆಲ್ ಮತ್ತು ಗುಂಡಿನ ದಾಳಿಯಿಂದ ಹೆದರಿ ಈಗಾಗಲೇ ಅನೇಕ ನಿವಾಸಿಗಳು ಗ್ರಾಮಗಳನ್ನು ತೊರೆದಿದ್ದಾರೆ. ಈ ವರ್ಷ ಆಗಸ್ಟ್ 1ರವರೆಗೆ ಪಾಕಿಸ್ತಾನ ಸೇನೆ 285 ಬಾರಿ ಕದನ ವಿರಾಮ ಉಲ್ಲಂಘಿಸಿದೆ.

Facebook Comments

Sri Raghav

Admin