ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಕಲಬುರಗಿಯಲ್ಲಿ ಶಕ್ತಿಪ್ರದರ್ಶನ

ಈ ಸುದ್ದಿಯನ್ನು ಶೇರ್ ಮಾಡಿ

Lingayt--.2

ಕಲಬುರಗಿ, ಸೆ.24-ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸಿ ಬಸವ ಅನುಯಾಯಿಗಳು ನಗರದ ಎನ್.ವಿ.ಮೈದಾನದಲ್ಲಿ ಇಂದು ವಿರಾಟ್ ಶಕ್ತಿ ಪ್ರದರ್ಶಿಸಿದರು. ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಮುಂದುವರೆದಿದ್ದು, ಮಾನ್ಯತೆ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಪಟ್ಟು ಹಿಡಿದಿರುವ ಮಠಾಧೀಶರು, ರಾಜಕೀಯ ಮುಖಂಡರು, ಬಸವ ಅನುಯಾಯಿಗಳು ಲಕ್ಷಾಂತರ ಸಂಖ್ಯೆಯಲ್ಲಿಂದು ಗುಲ್ಬರ್ಗಾದಲ್ಲಿ ಸೇರಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ರಾಷ್ಟ್ರೀಯ ಬಸವ ಸೇನೆ, ಲಿಂಗಾಯತ ಸೇನೆ ಸೇರಿದಂತೆ ವಿವಿಧ ಸಂಘಟನೆಗಳ ಹೆಸರಿನಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಅಪಾರ ಸಂಖ್ಯೆಯ ಬಸವ ಭಕ್ತರು ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆಗ್ರಹಿಸಿದರು.

ಲಿಂಗಾಯತ ಧರ್ಮ 12ನೆ ಶತಮಾನದಲ್ಲೇ ಉದಯವಾಗಿತ್ತು. ಬಸವಣ್ಣನವರು, ಅಲ್ಲಮಪ್ರಭುಗಳ ಅನುಭವ ಮಂಟಪದಲ್ಲಿಯೇ ಪ್ರಜಾಪ್ರಭುತ್ವ ರೂಪಿತಗೊಂಡಿತ್ತು. ಅದರ ಆಧಾರದ ಮೇಲೆ ನಮ್ಮ ಧರ್ಮ ಮುಂದುವರೆಯುತ್ತಿದೆ. ನಮ್ಮ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕೆಂದು ನಾವು ಹಲವು ದಶಕಗಳಿಂದ ಹೋರಾಟ ಮಾಡುತ್ತಿದ್ದೇವೆ. ಈಗ ಅದನ್ನು ತೀವ್ರಗೊಳಿಸಿದ್ದೇವೆ ಎಂದು ಸಮಾವೇಶದಲ್ಲಿ ಒತ್ತಾಯಿಸಲಾಯಿತು. ಇದು ಪಕ್ಷಾತೀತ ಹೋರಾಟವಾಗಿದೆ. ಇದರಲ್ಲಿ ಎಲ್ಲಾ ಪಕ್ಷದ ಮುಖಂಡರು, ಸರ್ಕಾರದ ಸಚಿವರು, ವಿಪಕ್ಷದವರು ಎಲ್ಲರೂ ಪಾಲ್ಗೊಳ್ಳುತ್ತಿದ್ದಾರೆ ಎಂದು ಶಾಸಕ ಬಿ.ಆರ್.ಪಾಟೀಲ್ ಹೇಳಿದರು. ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ಜನಾಂದಲೋನ ಆರಂಭಗೊಂಡಿದ್ದು, ಸಾಂವಿಧಾನಿಕ ಪ್ರಾತಿನಿಧ್ಯ ಸಿಗುವವರಿಗೆ ಹೋರಾಟ ನಿಲ್ಲುವುದಿಲ್ಲ ಎಂದರು.

Lingayt--4

ಬೃಹತ್ ರ್ಯಾಲಿ :

ಸಮಾರಂಭಕ್ಕೂ ಮುನ್ನ ನಗರದ ಗಂಜ್‍ನಿಂದ ಎನ್.ವಿ. ಕಾಲೇಜು ಮೈದಾನದವರೆಗೆ ಬೃಹತ್ ರ್ಯಾಲಿ ನಡೆಸಲಾಯಿತು. ರಾಜ್ಯ, ಹೊರರಾಜ್ಯಗಳಿಂದ ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಜನತೆ ಸಾಗರೋಪಾದಿಯಲ್ಲಿ ನಗರಕ್ಕೆ ಹರಿದು ಬಂದಿತ್ತು. ಶ್ರೀ ಶತಾಯುಷಿ ಡಾ. ಶಿವಲಿಂಗ ಶಿವಾಚಾರ್ಯರು ಅಹಮ್ಮದ್ ಪುರ, ಗದುಗಿನ ಜಗದ್ಗುರು ಡಾ. ತೋಂಟದ ಶ್ರೀಗಳು, ಇಳಕಲ್ ಮಹಾಂತಪ್ಪನವರು, ಚಿತ್ರದುರ್ಗದ ಡಾ. ಶಿವಮೂರ್ತಿ ಮುರಘಾ ಶರಣರು, ಮಾತೆ ಮಹಾದೇವಿ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಶ್ರೀಗಳು ಸೇರಿದಂತೆ ಸಚಿವರಾದ ಎಂ.ಬಿ. ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ಬಸವರಾಜ ರಾಯರೆಡ್ಡಿ, ವಿನಯ ಕುಲ್ಕರ್ಣಿ ಭಾಗವಹಿಸಿದ್ದರು.

Lin-gayat--01

Lingayat--3

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin