ಬೆಂಗಳೂರಲ್ಲಿ ನಿಲ್ಲದ ವಿದೇಶಿ ಪುಂಡರ ಹಾವಳಿ : ಕಾರಿಗೆ ಬೆಂಕಿ ಹಚ್ಚಿ ಅಟ್ಟಹಾಸ

ಈ ಸುದ್ದಿಯನ್ನು ಶೇರ್ ಮಾಡಿ

Fire-Ca-r

ಬೆಂಗಳೂರು, ಸೆ.24- ನಗರದಲ್ಲಿ ನೆಲೆಸಿರುವ ವಿದೇಶಿ ಪುಂಡರ ಹಾವಳಿ ಮಿತಿಮೀರಿದೆ.  ಹೆಣ್ಣೂರಿನ ವಡ್ಡರಪಾಳ್ಯದಲ್ಲಿ ನಿನ್ನೆ ರಾತ್ರಿ ಆಫ್ರಿಕನ್ ವಿದ್ಯಾರ್ಥಿಗಳು ಕುಡಿದ ಮತ್ತಿನಲ್ಲಿ ನೈಜೀರಿಯನ್ ಪ್ರಜೆಯ ಕಾರಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದ್ದಾರೆ. ಹೆಣ್ಣೂರಿನಲ್ಲಿ ನೆಲೆಸಿರುವ ಆಫ್ರಿಕನ್ ಪ್ರಜೆಗಳ ಎರಡು ಗುಂಪಿನ ನಡುವೆ ಕೆಲ ದಿನಗಳ ಹಿಂದೆ ಜಗಳವಾಗಿತ್ತು. ಆ ಸಂದರ್ಭದಲ್ಲಿ ಪರಸ್ಪರ ಬಿಯರ್ ಬಾಟಲಿನೊಂದಿಗೆ ಬಡಿದಾಡಿಕೊಂಡಿದ್ದರು.   ನಂತರ ಗಲಾಟೆಯಲ್ಲಿ ಪಾಲ್ಗೊಂಡಿದ್ದ ಆಫ್ರಿಕನ್ ಪ್ರಜೆಯೊಬ್ಬ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹೆಣ್ಣೂರು ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದರು.

ಇದೇ ದ್ವೇಷದ ಹಿನ್ನೆಲೆಯಲ್ಲಿ ಮೃತನ ಕಡೆಯವರು ನೈಜೀರಿಯನ್ ಪ್ರಜೆ ಎಲ್ವಿನ್ ಅವರ ಮನೆಗೆ ತೆರಳಿ ಜಗಳವಾಡಿ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.   ಬಾಣಸವಾಡಿ, ಹೆಣ್ಣೂರು ಸುತ್ತಮುತ್ತಲ ಹೊರವಲಯಗಳಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳ ಹಾವಳಿ ಮಿತಿಮೀರಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

Facebook Comments

Sri Raghav

Admin