‘ಮನ್ ಕಿ ಬಾತ್’ಗೆ 3 ವರ್ಷದ ಸಂಭ್ರಮ : ಸಾರ್ಥಕ ಕಾರ್ಯಕ್ರಮ ಎಂದು ಮೋದಿ ಬಣ್ಣನೆ

ಈ ಸುದ್ದಿಯನ್ನು ಶೇರ್ ಮಾಡಿ

Man-Ki-Baat

ನವದೆಹಲಿ, ಸೆ.24-ಪ್ರಧಾನಿ ನರೇಂದ್ರ ಮೋದಿ ಪ್ರತಿ ತಿಂಗಳ ಕೊನೆ ಭಾನುವಾರದಂದು ನಡೆಸಿಕೊಡುವ ಜನಪ್ರಿಯ ಮನ್ ಕಿ ಬಾತ್ (ಮನದ ಮಾತು) ಬಾನುಲಿ ಕಾರ್ಯಕ್ರಮಕ್ಕೆ ಇಂದು ಮೂರು ವರ್ಷಗಳು ಪೂರ್ಣಗೊಂಡಿವೆ. ತಮ್ಮ 36ನೇ ಆವೃತ್ತಿಯಲ್ಲಿ ಮಾತನಾಡಿದ ಮೋದಿ ದೇಶದ ಜನರ ನಿಲುವುಗಳು ಮತ್ತು ಆಶೋತ್ತರಗಳನ್ನು ಬಿಂಬಿಸುವ ಸಾರ್ಥಕ ಕಾರ್ಯಕ್ರಮ ಇದಾಗಿದೆ ಎಂದು ಬಣ್ಣಿಸಿದ್ದಾರೆ.  ಈ ಕಾರ್ಯಕ್ರಮವನ್ನು ನಾನು ರಾಜಕೀಯದಿಂದ ದೂರ ಇಟ್ಟಿದ್ದೇನೆ. ರಾಜಕೀಯ ಸ್ಪರ್ಶವಿಲ್ಲದೇ ದೇಶದ ಜನರನ್ನು ಸಂಪರ್ಕಿಸಲು ನಾನು ಪ್ರಯತ್ನಿಸಿದ್ದೇನೆ. ಇದರಲ್ಲಿ ನನ್ನದೇ ಆದ ಅಭಿಪ್ರಾಯಗಳಿಗಿಂತ ದೇಶವಾಸಿಗಳ ಭಾವನೆಗಳಿಗೆ ಆದ್ಯತೆ ನೀಡಲಾಗಿದೆ. ದೇಶದ ಪೂರಕ ಶಕ್ತಿಯನ್ನು ಇದು ಬಿಂಬಿಸಿದೆ ಎಂದು ತಮ್ಮ ಟೀಕಾಕಾರಿಗೆ ಪ್ರತ್ಯುತ್ತರವಾಗಿ ತಿಳಿಸಿದರು.

ತಮ್ಮ ಇಂದಿನ ಮನ್ ಕಿ ಬಾತ್‍ನಲ್ಲಿ ಎಂದಿನಂತೆ ಸ್ವಚ್ಚತಾ ಅಭಿಯಾನ, ಗ್ರಾಮಾಭಿವೃದ್ದಿ ವಿಷಯಗಳನ್ನು ಪ್ರಸ್ತಾಪಿಸಿದ ಪ್ರಧಾನಿ, ಅಕ್ಟೋಬರ್ 2ರ ಗಾಂಧಿ ಜಯಂತಿಗೆ 15 ದಿನಗಳ ಮುನ್ನವೇ ನಾವು ಆರ್ಥಪೂರ್ಣ ಸ್ವಚ್ಚ ಆಂದೋಲನ ಜÁರಿಗೊಳಿಸಿದ್ದೇವೆ. ಅಂದು ನಾವೆಲ್ಲರೂ ಖಾದಿ ವಸ್ತ್ರಗಳನ್ನು ಖರೀದಿಸೋಣ ಮತ್ತು ಧರಿಸೋಣ ಎಂದು ಕರೆ ನೀಡಿದರು.

ಗಾಂಧಿ ಜಯಂತಿ ಸಂದರ್ಭದಲ್ಲಿ ಬಡವರ ಬದುಕಿನಲ್ಲಿ ಸಮೃದ್ಧಿ-ನೆಮ್ಮದಿಯ ಹಣತೆ ಬೆಳಗಿಸಲು ನಾವು ಕಂಕಣಬದ್ದರಾಗೋಣ. ಸರ್ದಾರ್ ಪಟೇಲರು ಒಗ್ಗೂಡಿಸಿದ ಈ ಮಹಾ ದೇಶದ ಏಕತೆಯನ್ನು ನಾವೆಲ್ಲರೂ ಯಾವಾಗಲು ರಕ್ಷಿಸಲು ಒಂದಾಗೋಣ ಎಂದು ಅವರು ಹೇಳಿದರು.

Facebook Comments

Sri Raghav

Admin