ವರ್ಲ್ಡ್ ಮಿಸ್ ವೀಲ್‍ಚೇರ್ ಸೌಂದರ್ಯ ಸ್ಪರ್ಧೆಯಲ್ಲಿ ಬೆಂಗಳೂರಿನ ದಂತವೈದ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Miss-Worl--01

ಬೆಂಗಳೂರು, ಸೆ.23-ಉದ್ಯಾನನಗರಿಯಲ್ಲಿ ಅರಳಿರುವ ಅನೇಕ ಸುರಸುಂದರಿಯರು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಗಳಲ್ಲಿ ವಿಜೇತರಾಗಿ ನಳನಳಿಸುತ್ತಿರುವುದು ಹೆಮ್ಮೆಯ ಸಂಗತಿ. ಈಗ ಬೆಂಗಳೂರಿನ ಕೀರ್ತಿ ಮತ್ತೊಮ್ಮೆ ವಿಶ್ವಮಟ್ಟದಲ್ಲಿ ರಾರಾಜಿಸಲು ವೇದಿಕೆ ಅಣಿಗೊಂಡಿದೆ.
ಪೋಲೆಂಡ್‍ನಲ್ಲಿ ಅಕ್ಟೋಬರ್ 7ರಂದು ನಡೆಯುವ ಮಿಸ್ ವೀಲ್‍ಚೇರ್ ವಲ್ರ್ಡ್‍ಗೆ (ಗಾಲಿಕುರ್ಚಿಯ ವಿಕಲಚೇತನರ ಸೌಂದರ್ಯ ಸ್ಪರ್ಧೆ) ಬೆಂಗಳೂರಿನ 31 ವರ್ಷದ ದಂತವೈದ್ಯೆ ಡಾ. ರಾಜಲಕ್ಷ್ಮಿ ಭಾರತವನ್ನು ಪ್ರತಿನಿಧಿಸಲಿದ್ಧಾರೆ.

ಈಗಾಗಲೇ 2014ರ ಮಿಸ್ ವೀಲ್‍ಚೇರ್ ಇಂಡಿಯಾ ಸ್ಪರ್ಧೆಯಲ್ಲಿ ವಿಜಯಿಯಾಗಿರುವ ಅವರು ಈ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ ವಿಜೇತೆಯಾಗುವ ನೆಚ್ಚಿನ ಸೌಂದರ್ಯರಾಶಿ ಎನಿಸಿದ್ದಾರೆ.

Dr-compressed (1)

ದುರಂತ ಹಿನ್ನೆಲೆ :

ರಾಜಲಕ್ಷ್ಮಿ ರೂಪಸಿ ಮಾತ್ರವಲ್ಲ ಪ್ರತಿಭಾವಂತೆ. 2007ರಲ್ಲಿ ಈಕೆ ಬಿಡಿಎಸ್ (ದಂತ ವೈದ್ಯಕೀಯ ಪದವಿ) ಪೂರ್ಣಗೊಳಿಸಿದ್ದರು. ರಾಷ್ಟ್ರೀಯ ಸಮಾವೇಶವೊಂದರಲ್ಲಿ ಪ್ರಬಂಧ ಮಂಡಿಸಲು ಇವರಿಗೆ ಆಹ್ವಾನ ಬಂದಿತ್ತು. ಈಕೆ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಒಂದು ಕ್ಷಣ ನಿದ್ರೆಯ ಮಂಪರಿನಲ್ಲಿ ಮಾಡಿದ ಅಚಾತುರ್ಯದಿಂದ ಅಪಘಾತ ಸಂಭವಿಸಿತು. ಅದರ ಪರಿಣಾಮವಾಗಿ ಸ್ಪೈನಲ್ ಇಂಜುರಿ (ಬೆನ್ನುಹುರಿಗೆ ಬಲವಾದ ಪೆಟ್ಟು ಬಿತ್ತು) ಕಾರಣ ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡವು. ತನಗೆ ಒದಗಿದ ಭೀಕರ ಪರಿಸ್ಥಿತಿಯ ಈ ದುರದೃಷ್ಟಕರ ಸನ್ನಿವೇಶದಿಂದ ಆಘಾತಗೊಂಡರೂ ರಾಜಲಕ್ಷ್ಮಿ ವಿಚಲಿತರಾಗಲಿಲ್ಲ; ಧೃತಿಗೆಡಲಿಲ್ಲ. ಗಾಲಿಕುರ್ಚಿಯನ್ನೇ ಆಧಾರವಾಗಿರಿಸಿಕೊಂಡು ಕ್ರಿಯಾಶೀಲ ಚಟುವಟಿಕೆಗಳಲ್ಲಿ ನಿರತರಾದರು.

DSC_5058

ತಮಗೆ ಅತ್ಯಂತ ಪ್ರಿಯವಾದ ವೈದ್ಯಕೀಯ ವೃತ್ತಿಯೊಂದಿಗೆ ಮನ:ಶಾಸ್ತ್ರ ಮತ್ತು ಫ್ಯಾಷನ್ ಲೋಕದತ್ತ ಒಲವು ತೋರಿದರು. ವೃತ್ತಿ ಮತ್ತು ಪ್ರವೃತ್ತಿಗಳು ಈಕೆಯ ನ್ಯೂನತೆಯ ಕೊರಗು ಮತ್ತು ನೋವನ್ನು ಮರೆಸಿತು. ಒಮ್ಮೆ ಇಂಟರ್‍ನೆಟ್‍ನಲ್ಲಿ ಯಾವುದೋ ವಿಷಯದ ಬಗ್ಗೆ ಜಾಲಾಡುತ್ತಿದ್ದಾಗ ಅಲ್ಲಿ ಭಾರತದಲ್ಲಿ ವೀಲ್‍ಚೇರ್‍ನ ಸುಂದರಿಯರಿಗಾಗಿ ಸೌಂದರ್ಯ ಸ್ಪರ್ಧೆಯೊಂದು ನಡೆಯುತ್ತಿರುವ ಮಾಹಿತಿ ಇತ್ತು. ಅದರಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಿದರು. ಆ ಸ್ಪರ್ಧೆಯಲ್ಲಿ ಭಾಗವಹಿಸುವುದಕ್ಕೆ ಮುನ್ನವೇ ಸ್ಪರ್ಧೆಯಲ್ಲಿದ್ದವರು ರಾಜಲಕ್ಷ್ಮಿಯೇ ವಿಜೇತೆರಾಗುತ್ತಾರೆ ಎಂದು ಹೇಳಿದ್ದರು. ಅದು ನಿಜವಾಯಿತು. 2014ರ ಸೌಂದರ್ಯ ರಾಣಿ ಕಿರೀಟ ಮುಡಿಗೇರಿತು. ಕನಸು ಸಕಾರಗೊಂಡಿದ್ದಲ್ಲದೇ ಸುಂದರ ಸ್ವಪ್ನಗಳು ನನಸಾಗಲು ಮುನ್ನುಡಿಯಾಯಿತು.

DSC_4019_pp-compressed

ಐರೋಪ್ಯ ರಾಷ್ಟ್ರ ಪೋಲೆಂಡ್ ರಾಜಧಾನಿ ವಾರ್ಸಾದಲ್ಲಿ ಅಕ್ಟೋಬರ್ 7ರಂದು ನಡೆಯುವ ಮಿಸ್ ವೀಲ್‍ಚೇರ್ ವಲ್ರ್ಡ್‍ನಲ್ಲಿ ಮಿಂಚಲು ಡಾ. ರಾಜಲಕ್ಷ್ಮಿ ಅಂತಿಮ ಸಿದ್ದತೆಯಲ್ಲಿ ತೊಡಗಿದ್ದಾರೆ. ವಿಜೇತಯಾಗುವ ದೃಢವಿಶ್ವಾಸದೊಂದಿಗೆ ವಿಲ್‍ಚೇರ್ ಬ್ಯೂಟಿ ಭಾರತವನ್ನು ಪ್ರತಿನಿಧಿಸಿದ್ದಾರೆ.  ಪ್ರತಿಭೆ, ಸೌಂದರ್ಯದ ಖನಿಯಾಗಿರುವ ರಾಜಲಕ್ಷ್ಮಿ ಸಮಾಜಸೇವಕಿಯಾಗಿಯೂ ಗುರುತಿಸಿಕೊಂಡಿದ್ಧಾರೆ. ಶಾಲಾ-ಕಾಲೇಜುಗಳಲ್ಲಿ ಉಚಿತ ದಂತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾರೆ. ಅಲ್ಲದೇ ಗಾಲಿಕುರ್ಚಿ ಆಶ್ರಿತರಿಗೆ ವಿವಿಧ ವಿಷಯಗಳಲ್ಲಿ ತರಬೇತಿ ನೀಡಿ ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾರೆ.

Dr-compressed (1)

ಗಾಲಿಕುರ್ಚಿ ಸುಂದರಿ ಕೇವಲ ವೈದ್ಯೆ ಅಥವಾ ಫ್ಯಾಷನ್ ಪ್ರಿಯೆ ಮಾತ್ರವಲ್ಲ. ಉತ್ತಮ ಕ್ರೀಡಾಪಟು ಮತ್ತು ನೃತ್ಯಗಾತಿಯೂ ಹೌದು ವೀಲ್‍ಚೇರ್ ಬ್ಯಾಸ್ಕೆಟ್‍ಬಾಲ್ ಮತ್ತು ವೀಲ್‍ಚೇರ್ ಡ್ಯಾನ್‍ಗಳಲ್ಲಿ ಭಾಗವಹಿಸಿ ಎಲ್ಲರ ಹುಬ್ಬೇರವಂತೆ ಮಾಡಿದ್ದಾರೆ. ಅಂಗವೈಕಲ್ಯ ಸಾಧನೆ-ಸಾಮಥ್ರ್ಯಕ್ಕೆ ಅಡ್ಡಿಯಾಗದು ಎಂಬುದನ್ನು ಸಾಧಿಸಿ ತೋರಿಸುತ್ತಿರುವ ಚೈತನ್ಯಶೀಲರಲ್ಲಿ ಡಾ.ರಾಜಲಕ್ಷ್ಮಿ ಅವರೂ ಒಬ್ಬರು. ಇವರಿಗೆ ಶುಭವಾಗಲಿ ಎಂಬುದೇ ನಮ್ಮ ಆಶಯ.

Facebook Comments

Sri Raghav

Admin