3ನೇ ಏಕದಿನ ಪಂದ್ಯ : ಟಾಸ್ ಗೆದ್ದು ಆಸ್ಟ್ರೇಲಿಯಾ ಬ್ಯಾಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Matvcjhn-01

ಇಂದೋರ್,ಸೆ.24-ಇಲ್ಲಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.  ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಸತತ 2 ಸೋಲು ಅನುಭವಿಸಿರುವ ಕಾಂಗರೋ ಈ ಪಂದ್ಯವು ಮಾಡಿ ಇಲ್ಲವೇ ಮಡಿ ಪಂದ್ಯ ಎಂಬಂತಾಗಿದೆ. ಒಂದು ವೇಳೆ ಈ ಪಂದ್ಯ ಸೋತರೆ ಪ್ರವಾಸಿ ಆಸ್ಟ್ರೇಲಿಯಾಕ್ಕೆ ಸರಣಿ ಕೈತಪ್ಪಲಿದೆ. ಇತ್ತ ಭಾರತ ಸರಣಿ ಮೇಲೆ ಕಣ್ಣಿಟ್ಟಿದೆ.

ಸತತ ಎರಡು ಪಂದ್ಯಗಳಲ್ಲಿ ಟಾಸ್ ಸೋತಿರುವ ಕಾಂಗರೋ,ಇಂದು ಟಾಸ್ ಗೆದ್ದು ಯೋಚನೆ ಮಾಡದೆ ನಾಯಕ ಸ್ಟೀವನ್ ಸ್ಮೀತ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಆ್ಯರಂನ್ ಫಿಂಚ್ ಹಾಗೂ ಡೇವಿಡ್ ವಾನರ್ ಜೋಡಿಯೂ ಮೊದಲ ವಿಕೆಟ್ ಜೊತೆಯಾಟದಲ್ಲಿ 70 ರನ್ ಕಲೆ ಹಾಕಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಉತ್ತಮ ಆಟವಾಡುತ್ತಿದ್ದ ಆರಂಭಿಕ ಜೋಡಿಗೆ ಹಾರ್ದಿಕ್ ಪಾಂಡ್ಯೆ ಶಾಕ್ ನೀಡಿದರು. ವಾರ್ನರ್(42) ಅವರು ಬೌಲಿಂಗ್‍ನಲ್ಲಿ ಪಾಂಡ್ಯೆ ಬೌಲಿಂಗ್ ಕ್ಲೀನ್ ಬೋಲ್ಡ್ ಆದರು.

ಸ್ಕೋರ್ :
ಆಸ್ಟ್ರೇಲಿಯಾ : 115/1 (21.2 Ovs)

Facebook Comments

Sri Raghav

Admin