ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (25-09-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಮಸ್ತ ಕಾರ್ಯದಲ್ಲಿಯೂ ಮೂಲಭೂತ ವಾದ್ದನ್ನು ಉಳಿಸಿಕೊಳ್ಳಬೇಕೆಂಬುದು ಕಾರ್ಯಜ್ಞರ ನೀತಿ. ವೃಕ್ಷದ ಮೂಲವನ್ನು ಸರಿಯಾಗಿ ನೋಡಿ ಕೊಂಡರೆ ತಾನೇ ಪುಷ್ಪಫಲಾದಿ ಪ್ರಯೋಜನಗಳು ದೊರಕುತ್ತವೆ? -ರಾಮಾಯಣ, ಕಿಷ್ಕಿಂಧಾ

Rashi

ಪಂಚಾಂಗ : ಸೋಮವಾರ, 25.09.2017

ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.14
ಚಂದ್ರ ಉದಯ ಸಂ.10.15 / ಚಂದ್ರ ಅಸ್ತ ರಾ.10.06
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಶ್ವಯುಜ ಮಾಸ
ಶುಕ್ಲ ಪಕ್ಷ / ತಿಥಿ : ಪಂಚಮಿ (ಮ.02.28) / ನಕ್ಷತ್ರ: ಅನೂರಾಧ (ದಿನಪೂರ್ತಿ)
ಯೋಗ: ವಿಷ್ಕಂಭ (ಬೆ.08.08) / ಕರಣ: ಬಾಲವ-ಕೌಲವ (ಮ.02.28-ರಾ.03.32)
ಮಳೆ ನಕ್ಷತ್ರ: ಉತ್ತರಫಲ್ಗುಣಿ / ಮಾಸ: ಕನ್ಯಾ / ತೇದಿ: 09

 

ರಾಶಿ ಭವಿಷ್ಯ :

ಮೇಷ : ಉತ್ತಮ ಮಿತ್ರರು ದೊರಕುವರು
ವೃಷಭ : ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರ ರಿಗೆ ಉತ್ತಮ ದಿನ, ವಾಹನ ಖರೀದಿ ಮಾಡುವಿರಿ
ಮಿಥುನ: ಪ್ರಯಾಣ ಸುಖಮಯವಾಗಿರುವುದು
ಕಟಕ : ಅಪಕೀರ್ತಿ, ಚಿಂತೆ ನಿಮ್ಮನ್ನು ಕಾಡಲಿದೆ
ಸಿಂಹ: ಸಭೆ-ಸಮಾರಂಭಗಳಲ್ಲಿ ಭಾಗವಹಿಸುವಿರಿ
ಕನ್ಯಾ: ವಿದೇಶದಲ್ಲಿ ಉದ್ಯೋಗ ಹೊಂದಬಹುದು, ಆರೋಗ್ಯದ ಬಗ್ಗೆ ಎಚ್ಚರವಿರಲಿ
ತುಲಾ: ಶ್ರದ್ಧೆಯಿಂದ ಶ್ರಮ ಪಟ್ಟಲ್ಲಿ ಸ್ವಂತ ಮನೆ ಹೊಂದುವಿರಿ, ಪ್ರೇಮಿಗಳಿಗೆ ಉತ್ತಮ ದಿನ

ವೃಶ್ಚಿಕ : ತಂದೆಯ ಅನಾ ರೋಗ್ಯಕ್ಕೆ ಹಣ ವ್ಯಯವಾಗುತ್ತದೆ
ಧನುಸ್ಸು: ಸಮಾಜದಲ್ಲಿ ಗೌರವ, ಪ್ರತಿಷ್ಠೆ ದೊರೆಯುತ್ತದೆ
ಮಕರ: ಕೆಲಸ-ಕಾರ್ಯಗಳಲ್ಲಿ ಜವಾಬ್ದಾರಿ ಹೆಚ್ಚಾಗಿದ್ದರೂ ಸೂಕ್ತ ಪ್ರತಿಫಲ ಪಡೆಯುವಿರಿ,
ಕುಂಭ: ಸಾಲದ ಬಾಧೆ ಕಾಡಿಸುತ್ತದೆ, ವಿದ್ಯಾರ್ಥಿಗಳು ಓದಿನಲ್ಲಿ ಹಿಂದೆ ಬೀಳುವರು
ಮೀನ: ದಾಂಪತ್ಯ ಜೀವನ ಸುಖಮಯವಾಗಿರು ವುದು, ಕನಸು ನನಸಾಗುವ ಸಮಯ ಬಂದಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin