ಎಸ್‍ಪಿ ಇಬ್ಭಾಗ ಆಗಲ್ಲ, ಹೊಸ ಪಕ್ಷ ರಚಿಸಲ್ಲ : ಮುಲಾಯಂ

ಈ ಸುದ್ದಿಯನ್ನು ಶೇರ್ ಮಾಡಿ

Mulayama--01

ಲಕ್ನೋ, ಸೆ.25-ತಾವು ಹೊಸ ಪಕ್ಷ ರಚಿಸುವ ಸಾಧ್ಯತೆಯನ್ನು ಅಲ್ಲಗಳೆದಿರುವ ಸಮಾಜವಾದಿ ಪಕ್ಷದ ಪರಮೋಚ್ಚ ನಾಯಕ ಮುಲಾಯಂ ಸಿಂಗ್ ಯಾದವ್, ನನ್ನ ಪುತ್ರ ಅಖಿಲೇಶ್ ಯಾದವ್‍ಗೆ ನನ್ನ ಆಶೀರ್ವಾದ ಇದೆ ಎಂದು ಹೇಳಿದ್ಧಾರೆ. ಲಕ್ನೋದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಾಜವಾದಿ ಪಕ್ಷ ಇಬ್ಭಾಗವಾಗುವುದಿಲ್ಲ ಹಾಗೂ ಹೊಸ ಪಕ್ಷವನ್ನು ರಚಿಸುವ ಅಗತ್ಯವೂ ಇಲ್ಲ ಎಂದು ಹೇಳಿದರು.

ಅಖಿಲೇಶ್ ಯಾದವ್ ಕೈಗೊಂಡಿರುವ ಕೆಲವು ನಿರ್ಧಾರಗಳ ಬಗ್ಗೆ ನನ್ನ ಅಸಮಾಧಾನ ಮತ್ತು ವಿರೋಧ ಇರುವುದು ಸುಳ್ಳಲ್ಲ. ಪಕ್ಷದಲ್ಲಿ ಇಂಥ ಭಿನ್ನಾಭಿಪ್ರಾಯಗಳು ಸಹಜ. ಆದಾಗ್ಯೂ ನನ್ನ ಆಶೀರ್ವಾದ ಆತನ ಮೇಲೆ ಇದೆ ಎಂದು ತಿಳಿಸಿದರು. ತಂದೆ ಮತ್ತು ಮಗನ ನಡುವೆ ಕೆಲವೊಂದು ವಿಷಯಗಳಲ್ಲಿ ತಲೆದೋರಿರುವ ಭಿನ್ನಾಭಿಪ್ರಾಯ ಯಾವಾಗ ಉಪಶಮನವಾಗುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಈಗ ಪಕ್ಷದ ಬಲವರ್ಧನೆ ಮತ್ತು ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin