ಕೆರೆಗೆ ಉರುಳಿ ಬಿದ್ದ ಕಾರು : ವಿದ್ಯಾರ್ಥಿಗಳು ಗ್ರೇಟ್ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

ಶಿವಮೊಗ್ಗ, ಸೆ.26- ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಪ್ರವಾಸ ಹೊರಟಿದ್ದ ವಿದ್ಯಾರ್ಥಿಗಳಿದ್ದ ಎರಡು ಕಾರುಗಳ ಪೈಕಿ ಒಂದು ಕಾರು ಏಕಾಏಕಿ ಕೆರೆಯೊಳಗೆ ನುಗ್ಗಿದ್ದು, ಪವಾಡ ಸದೃಶ ರೀತಿಯಲ್ಲಿ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಬಳ್ಳಾರಿಯ ಬಿಎಂಐಟಿ ಕಾಲೇಜಿನ 10 ಮಂದಿ ವಿದ್ಯಾರ್ಥಿಗಳು ಎರಡು ಕಾರುಗಳಲ್ಲಿ ಜೋಗ್ ಜಲಪಾತ ವೀಕ್ಷಣೆಗಾಗಿ ಶಿವಮೊಗ್ಗದ ಕಡೆಗೆ ಪ್ರಯಾಣ ಬೆಳೆಸಿದ್ದರು. ಮುಂಜಾನೆ ಶಿವಮೊಗ್ಗ ಪಶ್ಚಿಮ ಸಂಚಾರಿ ವ್ಯಾಪ್ತಿಯಲ್ಲಿನ ಪುರಲೇಕೆರೆ ಏರಿ ಮೇಲೆ ತಿರುವು ಪಡೆದುಕೊಳ್ಳುತ್ತಿದ್ದಾಗ ನಿಯಂತ್ರಣ ತಪ್ಪಿ ಒಂದು ಕಾರು ನೋಡ ನೋಡುತ್ತಿದ್ದಂತೆಯೇ ಕೆರೆಯೊಳಗೆ ಬಿದ್ದಿದೆ.

ಇದನ್ನು ಗಮನಿಸಿದ ಸ್ಥಳೀಯರು ತಕ್ಷಣ ಕೆರೆಯೊಳಗಿಳಿದು ಕಾರಿನ ಗಾಜುಗಳನ್ನು ಒಡೆದು ವಿದ್ಯಾರ್ಥಿಗಳನ್ನು ಹೊರಗೆ ಕರೆತಂದು ಅವರ ಪ್ರಾಣ ರಕ್ಷಿಸಿದ್ದಾರೆ.
ನಂತರ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಕ್ರೇನ್ ಮೂಲಕ ಕೆರೆಯೊಳಗೆ ಬಿದ್ದಿದ್ದ ಕಾರನ್ನು ಮೇಲಕ್ಕೆತ್ತಿದ್ದಾರೆ. ಸಂಭ್ರಮದಿಂದ ಪ್ರವಾಸಕ್ಕೆ ತೆರಳಿದ್ದ ಈ ವಿದ್ಯಾರ್ಥಿಗಳಿದ್ದ ಕಾರು ನೋಡನೋಡುತ್ತಿದ್ದಂತೆಯೇ ಪುರಲೇಕೆರೆಗೆ ಉರುಳಿ ಬಿದ್ದಿದ್ದರಿಂದ ಕೆಲಕಾಲ ಆತಂಕದ ವಾತವರಣ ಉಂಟಾಗಿತ್ತು. ಸ್ಥಳೀಯರ ಪ್ರಕಾರ, ಈ ಕೆರೆಗೆ ತಡೆಗೋಡೆ ಇಲ್ಲದಿರುವುದೇ ಅನಾಹುತಕ್ಕೆ ಕಾರಣವಾಗಿದೆ. ಈಗಲಾದರೂ ಎಚ್ಚೆತ್ತುಕೊಂಡು ತಡೆಗೋಡೆ ನಿರ್ಮಿಸಿದರೆ ಪ್ರಾಣಾಪಾಯ ತಪ್ಪಿಸಬಹುದಾಗಿದೆ.

Facebook Comments

Sri Raghav

Admin