ಬ್ಯಾಂಕ್‍ನಲ್ಲೇ ನೇಣಿಗೆ ಶರಣಾದ ಮ್ಯಾನೇಜರ್

ಈ ಸುದ್ದಿಯನ್ನು ಶೇರ್ ಮಾಡಿ

Bank-Manager--01

ಬಾಗಲಕೋಟೆ,ಸೆ.26- ಮ್ಯಾನೇಜರ್ ಒಬ್ಬರು ಬ್ಯಾಂಕ್‍ನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಮುಧೋಳ ನಗರದಲ್ಲಿ ನಡೆದಿದೆ. ನಗರದ ರಾಮಲಿಂಗೇಶ್ವರ ಸಹಕಾರಿ ಬ್ಯಾಂಕ್‍ನ ಮ್ಯಾನೇಜರ್ 47 ವರ್ಷದ ಮುತ್ತಯ್ಯ ಮಠ ಸಾವಿಗೆ ಶರಣಾದ ವ್ಯಕ್ತಿ.

ಮ್ಯಾನೇಜರ್ ಮುತ್ತಯ್ಯ ಮಠ ನಿನ್ನೆ ರಾತ್ರಿ ಬ್ಯಾಂಕ್‍ನಲ್ಲೇ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಮುಧೋಳ ನಗರ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುತ್ತಯ್ಯ ಮಠ ತೀವ್ರ ಕಣ್ಣು ನೋವಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಮೃತ ದೇಃವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರಗೆ ಸಾಗಿಸಲಾಗಿದೆ.

Facebook Comments

Sri Raghav

Admin