ರೇಪಿಸ್ಟ್ ಬಾಬಾ ರಾಮ್ ರಹೀಂನ ದತ್ತು ಪುತ್ರಿ ಹನಿ ಮನೆ ಮೇಲೆ ಪೊಲೀಸ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Honery--1

ನವದೆಹಲಿ, ಸೆ.26-ಅತ್ಯಾಚಾರ ಪ್ರಕರಣಗಳಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಬಾ ಗುರ್ಮೀತ್ ರಾಮ್ ರಹೀಂ ಸಿಂಗ್‍ನ ದತ್ತುಪುತ್ರಿ ಎನ್ನಲಾದ ಹನಿಪ್ರೀತ್ ಇನ್ಸಾನ್ ನೇಪಾಳದಲ್ಲಿದ್ಧಾಳೆ, ಲಂಡನ್‍ಗೆ ಹಾರಿ ಹೋಗಿದ್ದಾಳೆ ಎಂಬ ಗೊಂದಲಗಳ ನಡುವೆ ಈಕೆ ನಿನ್ನೆ ದೆಹಲಿಯಲ್ಲಿ ಪ್ರತ್ಯಕ್ಷಳಾದರು. ಈ ಸಂಗತಿಯನ್ನು ಆಕೆಯ ವಕೀಲ ಪ್ರದೀಪ್ ಆರ್ಯ ಖಚಿತಪಡಿಸಿದ್ದಾರೆ.

ಈ ಮಾಹಿತಿ ಆಧರಿಸಿ ರಾಜಧಾನಿಯಲ್ಲಿ ಶೋಧ ಮುಂದುವರಿಸಿರುವ ಪೊಲೀಸರಿಗೆ ಹನಿ ಪತ್ತೆಯಾಗಿಲ್ಲ. ದೆಹಲಿಯ ಆಕೆಯ ನಿವಾಸದ ಮೇಲೆ ದಾಳಿ ನಡೆಸಿದ ಸಿಬ್ಬಂದಿ ಬರಿಗೈನಲ್ಲಿ ಹಿಂದಿರುಗಿದ್ದಾರೆ. ಆಕೆಗೆ ಜಾ ಮೀನು ಲಭಿಸುವ ಸಾಧ್ಯತೆ ಮುನ್ನವೇ ಬಂಧಿಸಬೇಕೆಂಬ ಪೊಲೀಸರ ಯತ್ನ ವಿಫಲವಾಗಿದೆ.
ಹನಿಗಾಗಿ ಪೊಲೀಸರು ಎಲ್ಲೆಡೆ ಜಾಲಾಡುತ್ತಿದ್ದಾಗಲೇ ಈಕೆ ಸೋಮವಾರ ತಮ್ಮ ಕಚೇರಿಗೆ ಬಂದು ನಿರೀಕ್ಷಣಾ ಜಾಮೀನಿಗೆ ಸಹಿ ಮಾಡಿ ಹಿಂದಿರುಗಿದಳು ಎಂದು ವಕೀಲರು ಹೇಳಿದ್ದಾರೆ.

ಈ ಪ್ರಕರಣದ ವಿಚಾರಣೆ ನಡೆಯುವ ಹಿನ್ನೆಲೆಯಲ್ಲಿ ಆಕೆ ದೆಹಲಿಯಲ್ಲೇ ಇದ್ದಾಳೆ. ನಿರೀಕ್ಷಣಾ ಜಾಮೀನಿಗೆ ಸಹಿ ಮಾಡಿದ ನಂತರವೂ ಆಕೆ ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾಳೆ ಎಂಬುದನ್ನು ಆರ್ಯ ಸ್ಪಷ್ಟಪಡಿಸಿದ್ದಾರೆ. ಡೇರಾ ಸಚ್ಚಾ ಸೌಧ (ಡಿಎಸ್‍ಎಸ್) ಮುಖ್ಯಸ್ಥ ಬಾಬಾ ಬಂಧನದ ನಂತರ ಹನಿ ನಾಪತ್ತೆಯಾಗಿದ್ದು, ಆಕೆಗಾಗಿ ಪೊಲೀಸರು ನಿರಂತರ ತಲಾಶ್ ನಡೆಸುತ್ತಿದ್ದಾರೆ.

Facebook Comments

Sri Raghav

Admin