30 ಮಂದಿಯನ್ನು ಕೊಂದು ತಿಂದ ನರ ರಾಕ್ಷಸ ದಂಪತಿ ಅರೆಸ್ಟ್….!

ಈ ಸುದ್ದಿಯನ್ನು ಶೇರ್ ಮಾಡಿ

Man-Eaters--01

ಮಾಸ್ಕೋ, ಸೆ.26-ರಷ್ಯಾದ ಕುಟುಂಬವೊಂದು 30ಕ್ಕೂ ಹೆಚ್ಚು ಜನರನ್ನು ಕೊಂದು ತಿಂದಿರುವ ಭಯಾನಕ ಘಟನೆ ನಡೆದಿದೆ. ಈ ಸಂಬಂಧ ಹಂತಕ ದಂಪತಿಯನ್ನು ಬಂಧಿಸಲಾಗಿದ್ದು, ಘೋರ ಕೃತ್ಯಗಳ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹಾಲಿವುಡ್‍ನ ಭಯಾನಕ ಕ್ಯಾನಿಬಾಲ್ ಸಿನಿಮಾಗಳ ಕ್ರೌರ್ಯ ಹಿಂಸೆಯನ್ನು ಮೀರಿಸಿರುವ ಈ ದಂಪತಿಯ ಕೃತ್ಯಗಳು ಬೆಚ್ಚಿಬೀಳಿಸುವಂತಿದೆ.  ರಷ್ಯಾದ ಕ್ರಾಸ್‍ನೋಡರ್ ಪಟ್ಟಣದಲ್ಲಿ ಕಳೆದ 18 ವರ್ಷಗಳಿಂದ ಈ ನರಭಕ್ಷಕ ಸತಿ-ಪತಿ ಎಸಗಿರುವ ಮತ್ತಷ್ಟು ಭೀಕರ ಕುಕೃತ್ಯಗಳು ವಿಚಾರಣೆ ವೇಳೆ ಬೆಳಕಿಗೆ ಬರುವ ಸಾಧ್ಯತೆ ಇದೆ.

Man-Eaters--04

ಡಿಮಿಟ್ರಿ ಬಕ್‍ಶೈವ್ (35) ಹಾಗೂ ನರ್ಸ್ ಆಗಿರುವ ಆತನ ಪತ್ನಿ ನಟಾಲಿಯಾ(42) 30ಕ್ಕೂ ಹೆಚ್ಚು ಕಗ್ಗೊಲೆಗಳನ್ನು ಮಾಡಿ ನರಭಕ್ಷಣೆ ಮಾಡಿದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.  ಕ್ರಾಸ್‍ನೋಡರ್ ಮಿಲಿಟರಿ ಅಕಾಡೆಮಿ ಸಮೀಪ ಯುವತಿಯೊಬ್ಬಳ ಅತ್ಯಂತ ವಿರೂಪಗೊಂಡ ಶವ ಪತ್ತೆಯಾದ ನಂತರ ತನಿಖೆ ಆರಂಭಿಸಿದ ಪೊಲೀಸರಿಗೆ ಈ ದಂಫತಿ ಸಿಕ್ಕಿಬಿದ್ದರು. ತೀವ್ರ ವಿಚಾರಣೆ ನಡೆಸಿದ ಬಳಿಕ ಒಂದೊಂದೇ ಭೀಭತ್ಸ ಕೃತ್ಯಗಳು ಬೆಳಕಿಗೆ ಬಂದವು.
ಪೊಲೀಸರು ಈವರೆಗೆ ಎಂಟು ಮೃತದೇಹಗಳ ಭಾಗಗಳ ಅವಶೇಷಗಳನ್ನು ಪತ್ತೆ ಮಾಡಿದ್ದು, ಪಟ್ಟಣದಲ್ಲಿ ಉಳಿದ ಶವಗಳಿಗೆ ತೀವ್ರ ಶೋಧ ಮುಂದುವರಿಸಿದ್ದಾರೆ.

Man-Eaters--03

ಫ್ರಿಜ್‍ನಲ್ಲಿ ಮಾನವರ ಮಾಂಸಗಳು..!

ಕಳೆದ 18 ವರ್ಷಗಳಿಂದಲೂ ಅಂದರೆ 1999ರಿಂದ ನರಭಕ್ಷಣೆ ಮತ್ತು ಪರಭಕ್ಷಣೆ ಅಭ್ಯಾಸ ಮಾಡಿಕೊಂಡಿರುವ ಡಿಮಿಟ್ರಿ ಮತ್ತು ನಟಾಲಿಯಾ ಈ ಅವಧಿಯಲ್ಲಿ 30ಕ್ಕೂ ಹೆಚ್ಚು ಮಂದಿಯನ್ನು ಕೊಂದಿದ್ದಾರೆ. ಇವರಲ್ಲಿ ಪುರುಷರು ಮತ್ತು ಮಹಿಳೆಯರೂ ಸೇರಿದ್ದಾರೆ. ಪ್ರಾಣಿಗಳನ್ನು ಕತ್ತರಿಸುವ ಹರಿತದ ಆಯುಧಗಳಿಂದ ಮನುಷ್ಯರನ್ನು ನಿರ್ದಯವನ್ನು ಕೊಚ್ಚಿ ಹಾಕಿ ತುಂಡು ತುಂಡಾಗಿ ಕತ್ತರಿಸಿ ಫ್ರಿಜ್‍ನಲ್ಲಿ ಮನೆಯ ರಹಸ್ಯ ನೆಲಮಾಳಿಗೆಯಲ್ಲಿನ ಶೈತ್ಯಾಗಾರದಲ್ಲಿ ಇಡುತ್ತಿದ್ದರು. ಭೋಜನಕ್ಕೆ ಎಷ್ಟು ಬೇಕೋ ಅಷ್ಟು ಮಾಂಸವನ್ನು ಕತ್ತರಿಸಿ ಬೇಯಿಸಿ ಡೈನಿಂಗ್ ಟೇಬಲ್‍ನಲ್ಲಿ ಅತ್ಯಂತ ಅಲಂಕಾರವಾಗಿ ಜೋಡಿಸಿ ಭಕ್ಷಿಸುತ್ತಿದ್ದರು ಎಂಬ ಸಂಗತಿ ಸಹ ಬಯಲಾಗಿದೆ.

Man-Eaters--02

ಫ್ರಿಜ್‍ನಲ್ಲಿ ಜಾಡಿಗಳಲ್ಲಿ ಚಿಕ್ಕಚಿಕ್ಕ ಮಾಂಸದ ತುಂಡುಗಳು ಸಹ ಪತ್ತೆಯಾಗಿದ್ದು ಅವುಗಳನ್ನು ಉಪ್ಪಿನಕಾಯಿ ಮಾದರಿಯಲ್ಲಿ ನರಮಾನವರ ಭಕ್ಷ್ಯ-ಭೋಜನದೊಂದಿಗೆ ನೆಂಚಿಕೊಂಡು ತಿನ್ನುತ್ತಿದ್ದರು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.  ಪರಭಕ್ಷಕ ಕ್ರೂರ ಪ್ರಾಣಿಗಳಂತೆ ಮಾನವ ಬೇಟೆಗೆ ಹೊಂಚು ಹಾಕುತ್ತಿದ್ದ ಈ ನರಘಾತಕ ದಂಪತಿ ಅತ್ಯಂತ ವ್ಯವಸ್ಥಿತವಾಗಿ ಅರವಳಿಕೆ ನೀಡಿ ಬಲಿಯನ್ನು ಕೊಂದು ತುಂಡು ತುಂಡಾಗಿ ಕತ್ತರಿಸುತ್ತಿದ್ದರು. ಕ್ಯಾಮೆರಾ ಮೊಬೈಲ್ ಫೋ ನ್ ಬಳಕೆ ಬಂದ ಮೇಲೆ ಅವುಗಳ ಮೂಲಕ ತಾವು ಹತ್ಯೆ ಮಾಡಿ ಭಾಗಭಾಗ ಮಾಡಿದ ರಕ್ತಸಿಕ್ತ ಮೃತದೇಹಗಳ ಜೊತೆ ಸೆಲ್ಫೀ ಕ್ಲಿಕಿಸುವ ಗೀಳು ಈ ಕ್ರೂರ ದಂಪತಿಗೆ ಇತ್ತು. ಈಗ ಅವುಗಳನ್ನೆಲ್ಲ ಪೊಲೀಸರು ವಶಪಡಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Man-Eaters--05

 

Facebook Comments

Sri Raghav

Admin