ಆಪರೇಷನ್ ಅರ್ಜುನ್ ಹೆಸರಲ್ಲಿ ಪಾಕ್ ವಿರುದ್ಧ ಭಾರತ ಕಾರ್ಯಾಚರಣೆ

ಈ ಸುದ್ದಿಯನ್ನು ಶೇರ್ ಮಾಡಿ

Border--1

ನವದೆಹಲಿ, ಸೆ.27-ಗಡಿಯಲ್ಲಿ ಪಾಕಿಸ್ತಾನ ಸೇನೆಯು ನಡೆಸುತ್ತಿರುವ ಪುಂಡಾಟಿಕೆಗಳಿಗೆ ಸೂಕ್ತ ಉತ್ತರ ನೀಡಿರುವ ಭಾರತೀಯ ಸೇನೆ, ಆಪರೇಷನ್ ಅರ್ಜುನ್ ಹೆಸರಿನ ಕಾರ್ಯಾಚರಣೆಯಡಿ ಗಡಿಯ ಆಚೆ ಭಾಗದಲ್ಲಿರುವ ಪಾಕಿಸ್ತಾನದ ಪ್ರಾಂತ್ಯಗಳ ಮೇಲೆ ದಾಳಿ ನಡೆಸಿದೆ. ಪಾಕಿಸ್ತಾನದ ನಿವೃತ್ತ ಸೇನಾಧಿಕಾರಿಗಳು, ಐಎಸ್‍ಐ ಕ್ವಾಟ್ರಸ್ ಹಾಗೂ ಪಾಕಿಸ್ತಾನದ ರೇಂಜರ್ ಕಚೇರಿಗಳ ಮೇಲೆ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಶೆಲï ದಾಳಿ ನಡೆಸಿವೆ.
ಇತ್ತೀಚೆಗೆ, ಪಾಕಿಸ್ತಾನ ಸೈನ್ಯವು ಭಾರತದ ಸೇನಾ ನೆಲೆಗಳನ್ನು, ಹಳ್ಳಿಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದಕ್ಕೆ ಪ್ರತಿಕಾರವಾಗಿ ಈ ದಾಳಿ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ.

ಭಾರತದ ಗಡಿಯೊಳಗೆ ಕಳ್ಳ ದಾರಿಗಳಿಂದ ನುಸುಳಿ ಬರುತ್ತಿರುವ ಭಯೋತ್ಪಾದಕರಿಗೆ ಗಡಿಯ ಆಚೆಯ ಭಾಗದಲ್ಲಿರುವ ಪಾಕಿಸ್ತಾನದ ನಿವೃತ್ತ ಸೈನಿಕರ ವಸತಿಗಳಲ್ಲಿ, ಐಎಸ್‍ಐ ಸೇನಾ ಕಚೇರಿಗಳಲ್ಲಿ, ಗ್ರಾಮಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಮಾಹಿತಿಯನ್ನು ಆಧರಿಸಿ ಶೆಲï ದಾಳಿ ನಡೆಸಲಾಗಿದೆ ಎಂದು ಬಿಎಸ್‍ಎಫ್ ತನ್ನ ದಾಳಿಯನ್ನು ಸಮರ್ಥಿಸಿಕೊಂಡಿದೆ.

 

Facebook Comments

Sri Raghav

Admin