ಪಾಕ್‍ನಲ್ಲಿ ಕೆಜಿ ಟೊಮ್ಯಾಟೋಗೆ 300 ರೂ.

ಈ ಸುದ್ದಿಯನ್ನು ಶೇರ್ ಮಾಡಿ

Tomato--01

ಲಾಹೋರ್, ಸೆ.27- ಪಾಕಿಸ್ತಾನದಲ್ಲಿ ಟೊಮೊಟೋ ಅಭಾವ ತೀವ್ರಗೊಂಡಿದ್ದು, ಒಂದು ಕೆಜಿಗೆ 300 ರೂ.ದಾಟಿದೆ. ಆದರೆ ಭಾರತದಿಂದ ಇದನ್ನು ಆಮದು ಮಾಡಿಕೊಳ್ಳಲು ಇಸ್ಲಾಮಾಬಾದ್ ಸ್ಪಷ್ಟವಾಗಿ ನಿರಾಕರಿಸಿದೆ. ಲಾಹೋರ್‍ನಲ್ಲಿ ಈ ವಿಷಯ ಸ್ಪಷ್ಟಪಡಿಸಿದ ಆಹಾರ ಭದ್ರತೆ ಖಾತೆ ಸಚಿವ ಸಿಕಂದರ್ ಹಯಾತ್ ಬೋಸನ್, ಪಾಕಿಸ್ತಾನದ ದೇಶಿಯ ಮಾರುಕಟ್ಟೆಗಳಲ್ಲಿ ಟೊಮೊಟೊ ಕೊರತೆ ಇದೆ. ಆದರೆ ಈ ಬೇಡಿಕೆಯನ್ನು ಪೂರೈಸಲು ಭಾರತದ ನೆರವು ಪಡೆಯುವುದಿಲ್ಲ ಎಂದು ತಿಳಿಸಿದರು.

ಪ್ರತಿ ವರ್ಷ ಪಾಕಿಸ್ತಾನದಲ್ಲಿ ಟೊಮೊಟೋ ಅಭಾವ ತಲೆದೋರುತ್ತಿದ್ದು, ಭಾರತ ಅ ಕೊರತೆಯನ್ನು ನೀಗಿಸುತ್ತಿತ್ತು. ಆದರೆ ಉಭಯ ದೇಶಗಳ ನಡುವಣ ಸಂಬಂಧ ಹದಗೆಟ್ಟ ಹಿನ್ನೆಲೆಯಲ್ಲಿ ಈಗ ಈ ವಹಿವಾಟಿಗೂ ಧಕ್ಕೆಯಾಗಿದೆ.

Facebook Comments

Sri Raghav

Admin