ಶೌಚಾಲಯದಲ್ಲಿ ಕಾಗೋಡು ತಿಮ್ಮಪ್ಪರ ಕರಪತ್ರ : ವಿಧಾನಸೌಧದಲ್ಲಿ ಅವಹೇಳನಕಾರಿ ಘಟನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.27- ರಾಜ್ಯ ಸರ್ಕಾರದ ಹಿರಿಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರನ್ನು ಅವಹೇಳನ ಮಾಡುವಂತಹ ಘಟನೆಯೊಂದು ವಿಧಾನಸೌಧದಲ್ಲಿ ನಡೆದಿದೆ. ವಿಧಾನಸೌಧದ ಮೂರನೆ ಮಹಡಿಯ 332ರ ಕೊಠಡಿ ಸಂಖ್ಯೆಯಲ್ಲಿರುವ ಪುರುಷರ ಶೌಚಾಲಯದಲ್ಲಿ ಕರಪತ್ರಗಳು ಪತ್ತೆಯಾಗಿವೆ. ಮೂತ್ರಾಲಯದ ಕಮೋಡ್‍ನಲ್ಲಿ ಕಾಗೋಡು ತಿಮ್ಮಪ್ಪ ಅವರ ಭಾವಚಿತ್ರ ಹಾಕಲಾಗಿದ್ದು, ಮೇಲೆ ಬ್ರಾಹ್ಮಣರನ್ನು ಕೆಳಭಾಗದಲ್ಲಿ ನಿಂದಿಸಿದ್ದಕ್ಕೆ ಎಂಬ ವಾಕ್ಯಗಳನ್ನು ಮುದ್ರಿಸಲಾಗಿದೆ. ವಿಧಾನಸೌಧದ ಶೌಚಾಲಯದಲ್ಲಿ ಈ ಕರಪತ್ರ ಕಂಡು ಬಂದಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ಬ್ರಾಹ್ಮಣರು ಮಾಂಸ ಭಕ್ಷಕರಾಗಿದ್ದರು ಎಂದು ಕಾಗೋಡು ತಿಮ್ಮಪ್ಪ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು. ಅಲ್ಲಿ ಪ್ರತಿರೋಧವೂ ವ್ಯಕ್ತವಾಗಿತ್ತು. ಆದರೆ, ಬಹಿರಂಗವಾಗಿ ಕಾಗೋಡು ಅವರನ್ನು ವೈಚಾರಿಕವಾಗಿ ಎದುರಿಸಲಾಗದ ಶಕ್ತಿಗಳು ಈ ರೀತಿ ಅವಹೇಳನಕಾರಿಯಾದ ಕರಪತ್ರವನ್ನು ಮುದ್ರಿಸಿ ಶೌಚಾಲಯದಲ್ಲಿ ಹಾಕುವ ಮೂಲಕ ಅವಮಾನಿಸಲಾಗಿದೆ.

Facebook Comments

Sri Raghav

Admin