1 ಲಕ್ಷ ಕೋಟಿ ರೂ.ವೆಚ್ಚದ ಬುಲೆಟ್ ಟ್ರೈನ್ ಯೋಜನೆಗೆ ರಿಲಾಯನ್ಸ್ ಒಪ್ಪಂದ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.27-ಪ್ರಧಾನಿ ನರೇಂದ್ರ ಮೋದಿ ಮುಂಬೈ-ಅಹಮದಾಬಾದ್ ನಡುವೆ ಹೈ-ಸ್ಪೀಡ್ ರೈಲು ಯೋಜನೆ ಸಾಕಾರಕ್ಕೆ ವೇಗದ ಚಾಲನೆ ಲಭಿಸಿರುವಾಗಲೇ ದೇಶದ ಅಗ್ರಮಾನ್ಯ ಸಂಸ್ಥೆ ರಿಯನ್ಸ್ ಗ್ರೂಪ್ ಒಂದು ಲಕ್ಷ ಕೋಟಿ ರೂ. ವೆಚ್ಚದ ಬುಲುಟ್ ಟ್ರೈನ್ ಯೋಜನೆಗೆ ಜಪಾನಿ ಕಂಪನಿಗಳೊಂದಿಗೆ ಕೈಜೋಡಿಸಿದೆ.  ಮುಂಬೈನಲ್ಲಿ ನಡೆದ 88ನೇ ಸರ್ವ ಸದಸ್ಯರ ಸಭೈಯಲ್ಲಿ ಈ ವಿಷಯ ತಿಳಿಸಿದ ರಿಲಾಯನ್ಸ್ ಗ್ರೂಪ್ ಅಧ್ಯಕ್ಷ ಅನಿಲ್ ಅಂಬಾನಿ, ರಿ-ಇನ್‍ಫಾ (ರಿಲಾಯನ್ಸ್ ಇನ್‍ಫ್ರಾಸ್ಟ್ರಕ್ಚರ್) ಯೋಜನೆಯಡಿ ಪ್ರಸ್ತಾಪಿಸಲಾಗಿರುವ ಭವಿಷ್ಯದ ಪ್ರಾಜೆಕ್ಟ್‍ಗಳ ಬಗ್ಗೆ ವಿವರಿಸಿದರು.

ತೀವ್ರ ಪೈಪೋಟಿ ಇದ್ದರೂ ತಮ್ಮ ಸಂಸ್ಥೆಯು ರಕ್ಷಣಾ ವಲಯದಲ್ಲೂ ಸಹಭಾಗಿತ್ವದ ತನ್ನ ಪ್ರಾಬಲ್ಯ ಪ್ರದರ್ಶಿಸಲು ಯೋಜನೆ ರೂಪಿಸಿದೆ. ನಮ್ಮ ರಿಲಾಯನ್ಸ್ ನೇವಲ್ ಅಂಡ್ ಎಂಜಿನಿರಿಂಗ್ ವಿಭಾಗವು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿವೆ ಎಂದು ಅವರು ಹೇಳಿದರು.

Facebook Comments

Sri Raghav

Admin