ಉಚಿತ ರಂಜಾನ್‍ ರೇಷನ್ ಕೂಪನ್ ಪಡೆಯಲು ಬಂದಿದ್ದ ಇಬ್ಬರು ಉಸಿರುಗಟ್ಟಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Dead-Body--01

ಬೆಂಗಳೂರು,ಸೆ.28- ಮುಂದಿನ ರಂಜಾನ್‍ಗಾಗಿ ಉಚಿತ ರೇಷನ್ ಕೊಡುವ ಕೂಪನ್ ಪಡೆಯಲು ಬಂದಿದ್ದ ಸಾವಿರಾರು ಜನಸಂದಣಿ ಮಧ್ಯೆ ಇಬ್ಬರು ಅಸ್ವಸ್ಥರಾಗಿ ಮೃತಪಟ್ಟಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಚಿತ್ತೂರಿನ ಅನ್ವರ್ ಪಾಷ(60), ಚಿಕ್ಕಬಳ್ಳಾಪುರದ ರೆಹಮತ್ ಉನೀಸಾ(65) ಮೃತಪಟ್ಟ ದುರ್ದೈವಿಗಳು.   ಶಿವಾಜಿನಗರದ ಸಯ್ಯದ್ ಅಫ್ಸರ್ ಎಂಬುವರು ಮುಂದಿನ ರಂಜಾನ್‍ಗಾಗಿ ಉಚಿತ ರೇಷನ್ ಕೊಡುವ ಕೂಪನ್‍ಗಳನ್ನು ಇಂದು ವಿತರಿಸಲಾಗುತ್ತದೆ ಎಂದು ವಾಟ್ಸಪ್ ಮೂಲಕ ಅವರ ಸಮುದಾಯದವರಿಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಇವರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಅಂದರೆ ನಾಲ್ಕೈದು ಸಾವಿರ ಮಂದಿ ಕೂಪನ್ ಕೊಡುವ ಸ್ಥಳವಾದ ಮೆಟಗಾನಹಳ್ಳಿಯ ಕಲ್ಯಾಣ ಮಂಟಪದಲ್ಲಿ ರಾತ್ರಿಯಿಂದಲೇ ಬಂದು ಸೇರಿದ್ದರು.  ಈ ವೇಳೆ ಉಸಿರಾಟಕ್ಕೆ ತೊಂದರೆಯಾಗಿ ವ್ಯಕ್ತಿ ಹಾಗೂ ಮಹಿಳೆಯೊಬ್ಬರು ಅಸ್ವಸ್ಥಗೊಂಡರು. ತಕ್ಷಣ ಇವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.   ಶವಗಳನ್ನು ಅಂಬೇಡ್ಕರ್ ಮೆಡಿಕಲ್ ಆಸ್ಪತ್ರೆಯಲ್ಲಿ ಮರಣೋ ತ್ತರ ಪರೀಕ್ಷೆಗೊಳಪಡಿಸಿರುವ ಬಾಗಲೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Facebook Comments

Sri Raghav

Admin