ಬೆಂಗಳೂರಿನ ನೂತನ ಮೇಯರ್ ಸಂಪತ್‍ರಾಜ್ ಬಗ್ಗೆ ಒಂದಿಷ್ಟು ಮಾಹಿತಿ

ಈ ಸುದ್ದಿಯನ್ನು ಶೇರ್ ಮಾಡಿ

Sampt-Raj-BBMP

ಬೆಂಗಳೂರು, ಸೆ.28-ಸಂಪತ್‍ರಾಜ್ ದೇವರಜೀವನಹಳ್ಳಿ ವಾರ್ಡ್‍ನ ಕಾಂಗ್ರೆಸ್ ಸದಸ್ಯ. ಎರಡನೇ ಬಾರಿ ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿರುವ ಇವರು ಎನ್‍ಎಸ್‍ಯುಐ ಸಕ್ರಿಯ ಕಾರ್ಯಕರ್ತರಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಬಿ.ಇ ಮೆಕಾನಿಕಲ್ ವ್ಯಾಸಂಗ ಮಾಡಿರುವ ಇವರು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಬಿಎಂಪಿ ಸದಸ್ಯರಾಗಿ ತಮ್ಮ ವಾರ್ಡ್‍ನ ಜನರ ಮನ ಸೆಳೆದಿದ್ದಾರೆ.

ಈ ಬಾರಿ ಮೇಯರ್ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲು ಆಗಿದ್ದರಿಂದ 48 ವರ್ಷ ವಯಸ್ಸಿನ ಕ್ರಿಯಾಶೀಲ ವ್ಯಕ್ತಿ ಸಂಪತ್‍ರಾಜ್ ಅವರಿಗೆ ದಕ್ಕಿದೆ. 42ನೆ ವರ್ಷದಲ್ಲೇ ಇವರು ಬಿಬಿಎಂಪಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಹುಶಃ ಅತಿ ಕಿರಿಯ ವಯಸ್ಸಿನ ಮೇಯರ್ ಎಂದೇ ಹೇಳಬಹುದು.

Facebook Comments

Sri Raghav

Admin