ಯಶ್ವಂತ್ ಸಿನ್ಹಾಗೆ ಶತ್ರುಘ್ನ ಸಿನ್ಹಾ ಸಾಥ್

ಈ ಸುದ್ದಿಯನ್ನು ಶೇರ್ ಮಾಡಿ

Shatrgna-011

ನವದೆಹಲಿ, ಸೆ.28-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ಕಟುವಾಗಿ ಟೀಕಿಸಿ ದೊಡ್ಡಮಟ್ಟದ ಸುದ್ದಿಯೊಂದಿಗೆ ವಿವಾದಕ್ಕೂ ಸಿಲುಕಿರುವ ಬಿಜೆಪಿ ಹಿರಿಯ ನಾಯಕ ಯಶ್ವಂತ್ ಸಿನ್ಹಾ ಅವರಿಗೆ ಪಕ್ಷದ ಸಂಸದ ಶತ್ರುಘ್ನ ಸಿನ್ಹಾ ಬೆಂಬಲ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಯಶ್ವಂತ್ ಸಿನ್ಹಾ ನಿಜವಾದ ರಾಜಕೀಯ ಪಟು. ಅವರು ಸರ್ಕಾರದ ಲೋಪದೋಷಗಳಿಗೆ ಕನ್ನಡಿ ಹಿಡಿದಿದ್ದಾರೆ ಎಂದು ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕೆಲವು ವಿಷಯಗಳಲ್ಲಿ ಬಿಜೆಪಿಯ ನಿಲುವಿನ ಬಗ್ಗೆ ಭಿನ್ನಾಭಿಪ್ರಾಯಗಳನ್ನು ಹೊಂದಿರುವ ಬಿಹಾರದ ಸಂಸದರೂ ಆದ ಹಿರಿಯ ಚಿತ್ರನಟ ಶತ್ರುಘ್ನ ಸಿನ್ಹಾ ಈ ಸನ್ನಿವೇಶವನ್ನು ಮತ್ತೊಮ್ಮೆ ಪರಿಣಾಮಕಾರಿಯಾಗಿ ಬಳಸಿಕೊಂಡು ಪಕ್ಷದ ಮುಖಂಡರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.  ಸಿನ್ಹಾ ಅವರ ಅಭಿಪ್ರಾಯದಲ್ಲಿ ತಪ್ಪೇನೂ ಇಲ್ಲ. ಅವರು ರಾಷ್ಟ್ರೀಯ ಹಿತಾಸಕ್ತಿಗಾಗಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಅವರು ಈ ಹಿಂದೆ ಕೇಂದ್ರ ಹಣಕಾಸು ಸಚಿವರಾಗಿದ್ದರು. ಅವರು ಪ್ರಸ್ತುತ ಸ್ಥಿತಿಗತಿಯನ್ನು ಅವಲೋಕಿಸಿ ಹೇಳಿಕೆ ನೀಡಿದ್ದಾರೆ. ಆದರೆ ಇದನ್ನೇ ಕೆಲವರು ದೊಡ್ಡದು ಮಾಡಿ ಮಕ್ಕಳಂತೆ ವರ್ತಿಸಿದ್ದಾರೆ ಎಂದು ಶತ್ರುಘ್ನ ಟೀಕಿಸಿದ್ದಾರೆ.

Facebook Comments

Sri Raghav

Admin