ಅಪರೂಪದ ‘ನಕ್ಷತ್ರ ಗೊಂಚಲು’ ಚಿತ್ರ ಬಿಡುಗಡೆ ಮಾಡಿದ ಇಸ್ರೋ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.29-ಸೌರಮಂಡಲ ಅನೇಕಾನೇಕ ವಿಸ್ಮಯಗಳ ಆಗರ. ಇದಕ್ಕೆ ಪುಷ್ಟಿ ನೀಡುವಂತೆ ಮೂರು ದಶಲಕ್ಷ ಪ್ರಭಾ ವರ್ಷಗಳಷ್ಟು ದೂರದಲ್ಲಿರುವ ಅಪರೂಪದ ನಕ್ಷತ್ರ ಗೊಂಚಲು (ಸ್ಟಾರ್ ಕ್ಲಸ್ಟರ್) ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ-ಇಸ್ರೋ ಬಿಡುಗಡೆ ಮಾಡಿದೆ.  ಕುಬ್ಜ ಅಂಕು-ಡೊಂಕಾದ ತಾರಾಮಂಡಲ ಎಂದೇ ಗುರುತಿಸಿಕೊಂಡಿರುವ ವುಲ್ಪ್-ಲುಂಡ್‍ಮಾರ್ಕ್-ಮೆಲೊಟ್ಟೆ ಅಥವಾ ಡಬ್ಲ್ಯುಎಲ್‍ಎಂನಲ್ಲಿ ಈ ವಿರಳ ತಾರಾ ಗೊಂಚಲು ಗೋಚರಿಸಿದೆ. ಕತ್ತಲ ಆಗಸದಲ್ಲಿ ಪುಟ್ಟ ಪುಟ್ಟ ನಕ್ಷತ್ರಗಳ ಒಂದು ಸಮೂಹದಂತೆ ಕಂಡುಬರುತ್ತಿದೆ.

ISRo--0225

ಎರಡು ವರ್ಷಗಳ ಹೀಂದ ಭಾರತದ ಪ್ರಥಮ ಸಮರ್ಪಿತ ಬಾಹ್ಯಾಕಾಶ ವೀಕ್ಷಣಾಲಯವಾದ ಆಸ್ಟ್ರೋಸ್ಯಾಟ್ ಪುಟ್ಟ ನೌಕೆಯಿಂದ ಮನಮೋಹಕ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಬೆಂಗಳೂರಿನ ಇಂಡಿಯನ್ ಇನ್ಸ್‍ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಭಾರತೀಯ ಖಗೋಳಭೌತ ಸಂಸ್ಥೆ-ಐಐಎ) ವಿಜ್ಞಾನಿಗಳು ಈ ಚಿತ್ರಗಳನ್ನು ಆಸ್ಟ್ರೋಸ್ಯಾಟ್‍ನಿಂದ ಕ್ಲಿಕ್ಕಿಸಿದ್ಧಾರೆ. ನೀಲಿ ಮತ್ತು ಹಳದಿ ಚಕ್ಕೆಗಳಲ್ಲಿ ಈ ನಕ್ಷತ್ರ ಗೊಂಚಲು ದೇದೀಪ್ಯಮಾನವಾಗಿ ಕಂಗೊಳಿಸುತ್ತಿದೆ. ಇಸ್ತೋದ ವೆಬ್‍ಸೈಟ್‍ನಲ್ಲಿ ಈ ಸ್ಟಾರ್‍ಕಸ್ಟರ್‍ನ ಸುಂದರ ದೃಶ್ಯಗಳನ್ನು ವೀಕ್ಷಿಬಹುದು.

ಆಸ್ಟ್ರೋಸ್ಯಾಟ್‍ನಲ್ಲಿ ಅಳವಡಿಸಲಾದ ನೇರಳಾತೀತ ಬಿಂಬ ದೂರದರ್ಶಕ ಬಳಸಿ ಐಐಎನ ವಿಜ್ಞಾನಿ ಅನ್ನಪೂರ್ಣಿ ಸುಬ್ರಮಣ್ಯಂ ಮತ್ತು ಅವರ ವಿದ್ಯಾರ್ಥಿ ಛಾಯಾನ್ ಮೊಂಡಲ್ ಈ ಅಪರೂಪದ ದೃಶ್ಯವನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆಹಿಡಿದಿದ್ದಾರೆ. ತಾರಾಮಂಡಲದಲ್ಲೇ ಈ ನಕ್ಷತ್ರಗೊಂಚಲು ಹೊಸದಾಗಿ ರೂಪಗೊಳ್ಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿವೆ. ಕ್ಷೀರಪಥ (ಮಿಲ್ಕಿ ವೇ) ಇಲ್ಲಿ ಕಂಡುಬರುವ ತಾರೆಗಳಿಗಿಂತ ಇವು 12 ಪಟ್ಟು ದೊಡ್ಡದಾಗಿವೆ. ಈ ಹೊಸ ಪ್ರತಿಬಿಂಬಗಳು ತಾರಾಮಂಡಳದ ನವ ವಿದ್ಯಮಾನಗಳ ಮೇಲೆ ಮತ್ತಷ್ಟು ಬೆಳಕು ಚೆಲ್ಲಲ್ಲು ಸಹಕಾರಿಯಾಗಿದೆ.

Facebook Comments

Sri Raghav

Admin