ಜಾಧವ್, ಪಾಂಡ್ಯ ಬ್ಯಾಟಿಂಗ್ ಗೆ ಕೊಹ್ಲಿ ಮೆಚ್ಚುಗೆ

ಈ ಸುದ್ದಿಯನ್ನು ಶೇರ್ ಮಾಡಿ

Kohli--01

ಬೆಂಗಳೂರು, ಸೆ. 29- ಆಸ್ಟ್ರೇಲಿಯಾ ವಿರುದ್ಧ ವೈಟ್‍ವಾಶ್ ಸಾಧಿಸಬೇಕೆಂಬ ಕನಸಿಗೆ ತೆರೆ ಬಿದ್ದಿದ್ದರು ಕೂಡ ಮಧ್ಯಮ ಕ್ರಮಾಂಕದಲ್ಲಿ ಕೇದಾರ್ ಜಾಧವ್ ಹಾಗೂ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯನ್ನು ಅರಿತು ಬ್ಯಾಟಿಂಗ್ ಮಾಡಿದ್ದಾರೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿನ್ನೆಯ ಪಂದ್ಯದಲ್ಲಿ ಅಗ್ರ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳೆಲ್ಲರೂ ಔಟಾಗಿ ಪೆವಿಲಿಯನ್ ಸೇರಿದರೂ ಕೂಡ ಜಾಧವ್ ಹಾಗೂ ಪಾಂಡ್ಯಾ 40 ಓವರ್‍ವರೆಗೂ ಬ್ಯಾಟಿಂಗ್ ಅನ್ನು ಕಾಯ್ದುಕೊಂಡಿದ್ದು ಮೆಚ್ಚುವಂತಹ ವಿಷಯ. ಸರಣಿಯುದ್ದಕ್ಕೂ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ನೀಡುತ್ತಿರುವ ಹಾರ್ದಿಕ್ ಪಾಂಡ್ಯಾ ಇದೇ ರೀತಿಯ ಆಟವನ್ನು ಮುಂದುವರೆಸಿದರೆ ಮುಂದಿನ ದಿನಗಳಲ್ಲಿ 4ನೆ ಕ್ರಮಾಂಕದಲ್ಲೇ ಅವರನ್ನು ಕ್ರೀಸ್‍ಗೆ ಇಳಿಸಲಾಗುವುದು ಎಂದು ಕೂಡ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಇದೇ ಸಂದರ್ಭದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

Facebook Comments

Sri Raghav

Admin