ದುರ್ಗಾ ಪೂಜೆಗಾಗಿ ಭಕ್ತಿಗೀತೆ ರಚಿಸಿದ ಮಮತಾ ಬ್ಯಾನರ್ಜಿ

ಈ ಸುದ್ದಿಯನ್ನು ಶೇರ್ ಮಾಡಿ

Mamata

ಕೋಲ್ಕತ್ತಾ, ಸೆ.28-ನಗರದಲ್ಲಿ ನಡೆಯುವ ಹೆಸರುವಾಸಿ ದುರ್ಗಾ ಪೂಜೆಗಾಗಿ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೊಸ ಭಕ್ತಿಗೀತೆ ರಚಿಸಿದ್ದಾರೆ.  ಬಯೋಚಿತ್ರೆರ್ ಮುಕ್ತೊಯ್ ಗಂಥಾ ವೆಕೋತರ್ ಮೊನಿಹರ್ ಎಂಬ ಹಾಡನ್ನು ಮಮತಾ ಬ್ಯಾನರ್ಜಿ ರಚಿಸಿದ್ದು , ಈ ಗೀತೆಗೆ ಜೀತ್ ಗಂಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಖ್ಯಾತ ಗಾಯಕಿ ಶ್ರೇಯಾ ಘೋಷಲ್ ಅವರ ಮಧುರ ಕಂಠದಿಂದ ಗೀತೆ ಹೊರಹೊಮ್ಮಿದೆ.

ಹಲವು ವರ್ಷಗಳ ಹಿಂದೆ ಮಮತಾ ಬ್ಯಾನರ್ಜಿ ಸುರುಚಿ ಸಂಘ ಎಂಬ ಗೀತೆ ರಚಿಸಿದ್ದರು. ಈ ಗೀತೆ ಹಲವು ಬಹುಮಾನಗಳನ್ನು ಗೆದ್ದಿತ್ತು. ಪ್ರಸ್ತುತ ದುರ್ಗಾ ಪೂಜೆಗಾಗಿ ರಚಿಸಿರುವ ಬಯೋಚಿತ್ರೆರ್ ಗೀತೆಯನ್ನು ಮುಖ್ಯಮಂತ್ರಿ ತಮ್ಮ ಫೇಸ್‍ಬುಕ್ ಫೇಜ್ ಹಾಗೂ ಟ್ವಿಟರ್‍ನಲ್ಲಿ ಶೇರ್ ಮಾಡಿದ್ದಾರೆ.

Facebook Comments

Sri Raghav

Admin