ಬೆಂಗಳೂರಿಗೆ ಆಗಮಿಸಿದ ಫಾದರ್ ಟಾಮ್

ಈ ಸುದ್ದಿಯನ್ನು ಶೇರ್ ಮಾಡಿ

Tom--022

ಬೆಂಗಳೂರು,ಸೆ.28-ವಿಶ್ವದ ಅತ್ಯಂತ ಕ್ರೂರ ಭಯೋತ್ಪಾದಕರಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರಿಂದ ಬಿಡುಗಡೆಯಾದ ಬೆಂಗಳೂರು ಮೂಲದ ಕೇರಳದ ಪಾದ್ರಿ ಫಾದರ್ ಟಾಮ್ ಉಳುನ್ನಾಳಿಲ್ ಇಂದು ಉದ್ಯಾನನಗರಿಗೆ ಆಗಮಿಸಿದರು. ಅವರು ಕೂಕ್ ಟೌನ್‍ನ ಡಾನ್ ಬಾಸ್ಕೋ ಪ್ರಾವಿನ್ಷಲ್ ಹೌಸ್‍ಗೆ ಭೇಟಿ ನೀಡಿ ಅಲ್ಲಿನ ಮುಖ್ಯಸ್ಥರನ್ನು ಭೇಟಿ ಮಾಡಿದರು.  ಫಾದರ್ ಟಾಮ್ ಸುರಕ್ಷಿತ ಬಿಡುಗಡೆಗಾಗಿ ಆಯೋಜಿಸಿದ್ದ ಥ್ಯಾಂಕ್ಸ್ ಗೀವಿಂಗ್ ಸಮಾರಂಭದಲ್ಲಿ ಅವರು ಭಾಗವಹಿಸಿದ್ದರು. ಉಗ್ರರಿಂದ ಅಪಹರಣಕ್ಕೆ ಒಳಗಾಗಿ 18 ತಿಂಗಳ ಬಳಿಕ ಸುರಕ್ಷಿತವಾಗಿ ಬಿಡುಗಡೆಯಾಗಿರುವುದಕ್ಕೆ ಅವರು ದೇವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಭಾರತದ ರಾಜತಾಂತ್ರಿಕ ಯತ್ನಗಳ ಫಲವಾಗಿ ಬಿಡುಗಡೆಯಾಗಿ ನಿನ್ನೆ ಸ್ವದೇಶಕ್ಕೆ ಹಿಂದಿರುಗಿರುವ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಿದ್ದರು ಇದಕ್ಕೂ ಮುನ್ನ ನಿನ್ನೆ ವಿಮಾನನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನನ್ನು ಉಗ್ರರಿಂದ ಸುರಕ್ಷಿತವಾಗಿ ಪಾರು ಮಾಡಲು ನೆರವಾದ ಎಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದರು.

Facebook Comments

Sri Raghav

Admin