ಮಹಿಳೆ ಅಪಹರಿಸಿ 23 ಮಂದಿಯಿಂದ ಗ್ಯಾಂಗ್‍ರೇಪ್..!

ಈ ಸುದ್ದಿಯನ್ನು ಶೇರ್ ಮಾಡಿ

Gang-rape

ಜೈಪುರ, ಸೆ.29-ದೆಹಲಿ ಮೂಲದ ಮಹಿಳೆಯೊಬ್ಬರನ್ನು ರಾಜಸ್ತಾನದ ಬಿಕನೇರ್‍ನಲ್ಲಿ ಅಪಹರಿಸಿ 23 ಮಂದಿ ಸಾಮೂಹಿಕ ಅತ್ಯಾಚಾ ಎಸಗಿರುವ ಅತ್ಯಂತ ನೀಚ ಘಟನೆ ಬೆಳಕಿಗೆ ಬಂದಿದೆ. ಬೀಕನೇರ್‍ನ ರಿದ್‍ಮಾಲರ್ಸ್ ಎಂಬಲ್ಲಿ ಜಮೀನು ವೀಕ್ಷಿಸಲು ತೆರಳಿದ ಸಂದರ್ಭದಲಿ ಈ ಕೃತ್ಯ ನಡೆದಿದೆ ಎಂದು 28 ವರ್ಷದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.  ಜೈಪುರ್ ರಸ್ತೆಯ ಋತುಶ್ಯಾಂ ಮಂದಿರ ಬಳಿ ಬಸ್ಸಿಗಾಗಿ ಕಾಯುತ್ತಿದ್ದಾಗ, ಮಧ್ಯಾಹ್ನ 2.30ರಲ್ಲಿ ವಾಹನವೊಂದರಲ್ಲಿ ಬಂದ ಕಾಮುಕರು ಮಹಿಳೆಯನ್ನು ಅಪಹರಿಸಿದರು. ಗಣಿ ಪ್ರದೇಶವೊಂದಕ್ಕೆ ಕರೆದೊಯ್ಯುವುದಕ್ಕೆ ಮುನ್ನ ವಾಹನದಲ್ಲೇ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿದರು ಮೊದಲು ಇಬ್ಬರು ಲೈಂಗಿಕ ದೌರ್ಜನ್ಯ ಎಸಗಿದರು. ನಂತರ ಆರು ಮಂದಿ ಸಾಮೂಹಿಕ ಅತ್ಯಾಚಾರ ನಡೆಸಿದರು. ಬಳಿಕ ಪಲಾನಾ ಗ್ರಾಮದ ವಿದ್ಯುತ್ ಉಪಕೇಂದ್ರಕ್ಕೆ ಕರೆದೊಯ್ದು ಮತ್ತಷ್ಟು ಮಂದಿ ಈ ಕೃತ್ಯದಲ್ಲಿ ಸೇರಿಕೊಂಡರು ಎನ್ನಲಾಗಿದೆ.

ಮರುದಿನ ಮುಂಜಾನೆ 4 ಗಂಟೆಗೆ ಅಪಹರಿಸಿದ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ ಎಂದು ಜೈನಾರಾಯಣ ವ್ಯಾಸ ಕಾಲೋನಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಮಹಿಳೆ ಆರೋಪಿಸಿದ್ದಾರೆ.  ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ದುಷ್ಕರ್ಮಿಗಳಿಗಾಗಿ ಶೋಧ ನಡೆಯುತ್ತಿದೆ ಎಂದು ತನಿಖಾಧಿಕಾರಿ ರಾಜೇಂದ್ರ ಸಿಂಗ್ ಹೇಳಿದ್ದಾರೆ.

Facebook Comments

Sri Raghav

Admin