ಮೆಕ್ಸಿಕೋ ವಿನಾಶಕಾರಿ ಭೂಕಂಪದಲ್ಲಿ ಸತ್ತವರ ಸಂಖ್ಯೆ 344ಕ್ಕೇರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಮೆಕ್ಸಿಕೊ ಸಿಟಿ, ಸೆ.29-ಮೆಕ್ಸಿಕೋ ಮೇಲೆ ಸೆ.19ರಂದು ಸಂಭವಿಸಿದ ವಿನಾಶಕಾರಿ ಭೂಕಂಪದಲ್ಲಿ ಈವರೆಗೆ 344 ಮಂದಿ ಮೃತಪಟ್ಟಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳಿಂದ ಅವಶೇಷಗಳನ್ನು ಸಂಪೂರ್ಣ ತೆರವುಗೊಳಿಸಲಾಗಿದೆ.

Mexixo--02

ಭೀಕರ ಭೂಕಂಪದಿಂದ ಮೆಕ್ಸಿಕೊ ಸಿಟಿಯಲ್ಲಿ ಮೃತಪಟ್ಟ 205 ಮಂದಿ ಸೇರಿದಂತೆ ಈತನಕ 344 ಜನರು ಸಾವಿಗೀಡಾಗಿದ್ದಾರೆ ಎಂದು ರಾಷ್ಟ್ರೀಯ ನಾಗರಿಕ ರಕ್ಷಣಾ ಇಲಾಖೆ ಮುಖ್ಯಸ್ಥ ಲೂಯಿಸ್ ಫಿಲಿಪ್ ಪ್ಯೂಂಟೆ ಅಧಿಕೃತವಾಗಿ ಘೋಷಿಸಿದ್ದಾರೆ. ಧರಾಶಾಯಿಯಾದ ಕಟ್ಟಡಗಳ ಆವಶೇಷಗಳಿಂದ ಇನ್ನೂ ಕೆಲವು ಮೃತದೇಹಗಳು ಪತ್ತೆಯಾಗುವುದರೊಂದಿಗೆ ಸಾವಿನ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.

Facebook Comments

Sri Raghav

Admin