ಲಿಬಿಯಾದಲ್ಲಿ ವಾಯುದಾಳಿಗೆ ಅನೇಕ ಐಎಸ್ ಉಗ್ರರು ಫಿನಿಷ್

ಈ ಸುದ್ದಿಯನ್ನು ಶೇರ್ ಮಾಡಿ

ವಾಷಿಂಗ್ಟನ್, ಸೆ.29-ಲಿಬಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕರ ಮೇಲೆ ವಾಯದಾಳಿಗಳನ್ನು ಮತ್ತಷ್ಟು ತೀವ್ರಗೊಳಿಸಿರುವ ಅಮೆರಿಕ ನೇತೃತ್ವದ ಸೇನಾ ಪಡೆ ಹಲವಾರು ಉಗ್ರರನ್ನು ಕೊಂದು ಹಾಕಿದೆ. ಮೆಡಿಟರೇನಿಯನ್ ಸಾಗರ ತಟದಲ್ಲಿರುವ ಸಿರ್ಟೆ ಪಟ್ಟಣದಿಂದ 160 ಕಿ.ಮೀ.ದೂರದ ಪ್ರದೇಶದಲ್ಲಿ ಅಮೆರಿಕ ಯುದ್ಧ ವಿಮಾನಗಳು ಘರ್ಜಿಸುತ್ತಾ ಮಿಂಚಿನ ದಾಳಿ ನಡೆಸಿದವು.

Air-Strike-v-01

ಈ ಕಾರ್ಯಾಚರಣೆಯಲ್ಲಿ ಅನೇಕ ಐಎಸ್ ಬಂಡುಕೋರರು ಹತರಾಗಿದ್ದಾರೆ ಎಂದು ಅಮೆರಿಕ-ಆಫ್ರಿಕಾ ಕಮ್ಯಾಂಡ್ ತಿಳಿಸಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಲಿಬಿಯಾದಲ್ಲಿ ನಡೆದ ಮೊದಲ ಪೂರ್ಣಪ್ರಮಾಣದ ವಾಯುದಾಳಿ ಇದಾಗಿದೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin