4ನೇ ಬಾರಿಗೆ ಜರ್ಮನಿಯ ಅಧಿಕಾರದ ಚುಕ್ಕಾಣಿ ಹಿಡಿದ ಮಾರ್ಕೆಲ್’ಗೆ ಟ್ರಂಪ್ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

Trump--021

ವಾಷಿಂಗ್ಟನ್,ಸೆ.29- ಚುನಾವಣೆಯಲ್ಲಿ ಜಯಭೇರಿ ಬಾರಿಸಿ 4ನೇ ಬಾರಿ ಜರ್ಮನಿಯ ಅಧಿಕಾರದ ಚುಕ್ಕಾಣಿ ಹಿಡಿದ ಚಾನ್ಸಲರ್ ಎಂಜಲ ಮಾರ್ಕೆಲ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಭಾಶಯ ಕೋರಿದರು. ಡೋನಾಲ್ಡ್ ಟ್ರಂಪ್ ದೂರವಾಣಿ ಮೂಲಕ ಮಾರ್ಕೆಲ್ ಅವರಿಗೆ ಶುಭಾಷಯ ಕೋರಿದ್ದು ಜೊತೆಗೆ ಇರಾನ್ ಪರಮಾಣು ಒಪ್ಪಂದದ ಬಗ್ಗೆ ಚರ್ಚೆ ನಡೆಸಿದರು.

ಉಭಯ ರಾಷ್ಟ್ರಗಳ ರಕ್ಷಣೆ ಕುರಿತಂತೆ ಗಂಭೀರ ವಿಷಯಗಳ ಬಗ್ಗೆ ಚರ್ಚಿಸಿದರು. ಎರಡೂ ರಾಷ್ಟ್ರಗಳ ನಡುವೆ ಶಾಂತಿ ಮತ್ತು ಭಾತೃತ್ವ ಭಾವನೆಯನ್ನು ಗಟ್ಟಿಗೊಳಿಸುವ ಸಲುವಾಗಿ ಪರಿಣಾಮಕಾರಿಯಾದ ನಿಲುವುಗಳನ್ನು ಹಂಚಿಕೊಂಡರು. ಇದರ ಜೊತೆಗೆ ಇರಾನ್‍ನ ಮಧ್ಯಪೂರ್ವದಲ್ಲಿನ ಹಾನಿಕಾರಕ ಚಟುವಟಿಕೆಗಳ ಬಗ್ಗೆಯೂ ಚರ್ಚಿಸಿ ಪರಿಹಾರ ಕುರಿತಂತೆ ಮಾರ್ಗೋಪಾಯಗಳ ಬಗ್ಗೆ ಸಮಾಲೋಚನೆ ನಡೆಸಿದರು.

Facebook Comments

Sri Raghav

Admin