ಶಿಕಾರಿಪುರಾನಾ..ಉತ್ತರ ಕರ್ನಾಟಕಾನಾ..? : ಬಿಎಸ್‍ವೈ ಸ್ಪರ್ಧೆ ಭಾರೀ ಬಗ್ಗೆ ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

yadiyurappa--1

ಬೆಂಗಳೂರು, ಸೆ.29- ಹಲವು ದಿನಗಳಿಂದ ರಾಜ್ಯ ರಾಜಕೀಯ ವಲಯದಲ್ಲಿ ಯಡಿಯೂರಪ್ಪನವರು ಮುಂದಿನ ಚುನಾವಣೆಯಲ್ಲಿ ಶಿಕಾರಿಪುರ ಬಿಟ್ಟು, ಉತ್ತರ ಕರ್ನಾಟಕದ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ ಚರ್ಚೆಯಾಗುತ್ತಿದೆ. ಅವರೊಬ್ಬರ ಕ್ಷೇತ್ರ ಮಾತ್ರ ಬದಲಾವಣೆ ಮಾಡು ತ್ತಾರಾ? ಇಲ್ಲ, ಈಗಾಗಲೇ ಓಡಾಡುತ್ತಿರುವ ಮಾಹಿತಿಯಂತೆ 25 ಕ್ಕೂ ಹೆಚ್ಚು ಮುಖಂಡರ ಕ್ಷೇತ್ರಗಳನ್ನು ಬದಲು ಮಾಡುತ್ತಾರಾ? ನಗಣ್ಯ ಪ್ರದೇಶಗಳಲ್ಲಿ ಬಿಜೆಪಿ ಪ್ರಬಲ ಮಾಡುವ ತಂತ್ರಗಾರಿಕೆ ಇದರ ಹಿಂದಿದೆಯೇ? ಅಥವಾ ಕ್ಷೇತ್ರ ಬದಲಾವಣೆಗೆ ಯಡಿ ಯೂರಪ್ಪನವರ ಮನಸ್ಸು ಹದಗೊಳಿಸಲು ಅನ್ಯ ನಾಯಕರ ಹೆಸರನ್ನು ಸುಖಾಸುಮ್ಮನೆ ಹರಿಯಬಿಡಲಾಗಿದೆಯೇ? ಎಲ್ಲಕ್ಕಿಂತ ಮಿಗಿಲಾಗಿ ಯಡಿಯೂರಪ್ಪನವರನ್ನು ಹಣಿಯುವ ಉದ್ದೇಶವೇನಾದರೂ ಇದರ ಹಿಂದಿದೆಯೇ?.

ಕಾರಣ, ಬಿಎಸ್ ವೈ ಅವರು ತೆರದಾಳ ಕ್ಷೇತ್ರದಲ್ಲಿ ಹಾಲಿ ಸಚಿವೆ ಉಮಾಶ್ರೀ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿದ್ದವು. ಆದರೆ ಇಂದು ಯಡಿಯೂರಪ್ಪನವರ ಹೇಳಿಕೆ ಅದಕ್ಕೆ ಭಿನ್ನವಾಗಿದೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿ ಯೂರಪ್ಪ ನವರು, ಶಿಕಾರಿಪುರದಿಂದಲೇ ಸ್ಪರ್ಧಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಇಲ್ಲಿಂದಲೇ ಸ್ಪರ್ಧಿಸಲು ನನಗೆ ಒಲವಿದೆ. ಈ ಕುರಿತಾಗಿ ಪಕ್ಷದ ಮುಖಂಡರ ಮನವೊಸಿಲು ಯತ್ನಿಸುತ್ತೇನೆ. ಅವರ ಒಪ್ಪಿಗೆ ಪಡೆದು ಶಿಕಾರಿಪುರದಿಂದಲೇ ಸ್ಪರ್ಧಿಸುತ್ತೇನೆ ಎಂದು ಬಿಎಸ್ ವೈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪನವರಿಗೆ ತೆರದಾಳ ಕ್ಷೇತ್ರದಿಂದ ಸ್ಪರ್ಧಿಸುವ ಮನಸ್ಸಿಲ್ಲವೆಂಬುದು ಈ ಹೇಳಿಕೆಯಿಂದ ಸ್ಪಷ್ಟವಾಗುತ್ತಿದೆ.ಮುಂದಿನ ಚುನಾವಣೆಯಲ್ಲಿ ಬಿಎಸ್ ವೈ ಅವರ ಕ್ಷೇತ್ರ ಬದಲಿಸುವುದರ ಹಿಂದೆ ಅವರನ್ನು ರಾಜಕೀಯವಾಗಿ ಮಟ್ಟಹಾಕುವ ಷಡ್ಯಂತ್ರ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು.
ಶೋಭಾ ಕರಂದ್ಲಾಜೆ ಅವರು ಯಡಿಯೂರಪ್ಪನವರು ಶಿಕಾರಿಪುರದಿದಲೇ ಸ್ಪರ್ಧಿಸಲಿದ್ದು, ಬೇರೆ ಕಡೆಯಿಂದ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿಕೆ ನೀಡಿದ್ದರೂ ಬಿಎಸ್ ವೈ ಅವರ ಕ್ಷೇತ್ರ ಬದಲಾವಣೆಗೆ ಪಕ್ಷದಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿದೆ. ಉತ್ತರ ಕರ್ನಾಟಕದಲ್ಲಿ ಪ್ರಾಬಲ್ಯ ಹೊಂದಿರುವ ಲಿಂಗಾಯತರ ಸಮುದಾಯದ ಬೆಂಬಲ ಪಡೆಯಲು ಯಡಿಯೂರಪ್ಪನವರನ್ನು ಈ ಪ್ರದೇಶದಿಂದ ಚನಾವಣೆಗೆ ಇಲಿಸಲಾಗುವುದು ಎಂಬ ಕಾರಣಗಳು ಕೇಳಿಬಂದಿದ್ದವು.

ಆದರೆ, ಪ್ರತ್ಯೇಕ ಧರ್ಮದ ವಿಚಾರದಲ್ಲಿ ವೀರಶೈವ ಹಾಗೂ ಲಿಂಗಾಯತ ಬಣಗಳ ನಡುವಣ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಲಿಂಗಾಯತರ ಭಾಗದಲ್ಲೇ ಬಿಎಸ್ ವೈ ಅವರನ್ನು ನಿಲ್ಲಿಸಿ ಅವರನ್ನು ರಾಜಕೀಯವಾಗಿ ಹಣಿಯುವ ಪ್ರಯತ್ನಗಳು ನಡೆಯುತ್ತಿರುವ ಬಗ್ಗೆ ಚರ್ಚೆಯಾಗುತ್ತಿತ್ತು.ಈ ಎಲ್ಲದರ ಹಿನ್ನೆಲೆ ಯಲ್ಲಿ ಆರಂಭದಲ್ಲಿ ಕ್ಷೇತ್ರ ಬದಲಾವಣೆಗೆ ಒಪ್ಪಿದ್ದ ಯಡಿಯೂರಪ್ಪನವರು ಈಗ ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಕ್ಷೇತ್ರ ಬದಲಾವಣೆ ಹಿಂದಿರುವ ಮರ್ಮವಾದರೂ ಏನು?

ನಿಜಕ್ಕೂ ಕ್ಷೇತ್ರ ಬದಲಾವಣೆ ಎಂಬುದು ಯಡಿಯೂರಪ್ಪನವರಿಗೆ ಅಗ್ನಿಪರೀಕ್ಷೆ. ಲಿಂಗಾಯತ ಮತಗಳನ್ನು ಸಾರಾಸಗಟಾಗಿ ಸೆಳೆಯಲು ಅವರಿಗೆ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸಲು ಸೂಚಿಸಲಾಗಿದೆ ಎಂಬುದು ಕೇಳಲು ಬಹಳ ಇಂಪಾಗಿದೆ. ಆದರೆ ವಾಸ್ತವದಲ್ಲಿ ಅಷ್ಟು ಸುಲಭವಲ್ಲ. ಹೊಸ ಕ್ಷೇತ್ರದಲ್ಲಿ ಗೆಲ್ಲಲು ಅವರು ಎಬಿಸಿಡಿಯಿಂದ ಆರಂಭಿಸಬೇಕು. ಅವರ ಗಮನವೆಲ್ಲ ಸೀಟು ಗೆಲ್ಲುವುದರ ಕಡೆಗೇ ಕೇಂದ್ರೀಕೃತವಾಗಿರುತ್ತದೆ. ಆಗ ಉಳಿದ ಭಾಗಗಳಿಗೆ ತಮ್ಮ ಶಕ್ತಿ, ಗಮನ ಹಂಚುವುದು ಅಸಾಧ್ಯ. ಅಗ್ನಿಪರೀಕ್ಷೆಯಲ್ಲಿ ಗೆದ್ದು ಬಂದರೆ ಅವರ ಅದೃಷ್ಟ. ಆಗೇನಾದರೂ ಒಂದೊಮ್ಮೆ ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೆ ಅದನ್ನು ಪಕ್ಷಕ್ಕೆ ಮತ್ತು ರಾಷ್ಟ್ರೀಯ ನಾಯಕತ್ವಕ್ಕೆ ಸಮರ್ಪಿಸಿಕೊಳ್ಳುವುದು.

ಯಡಿಯೂರಪ್ಪನವರ ಗೆಲವು ಸಮೇತ. ಅಪ್ಪಿತಪ್ಪಿ ಯಡಿಯೂರಪ್ಪ ಸೋತು ಹೋದರೆ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ¾ಶಾಸಕರಾಗಲು ಆಗಲಿಲ್ಲ, ನಿಮ್ಮನ್ನು ಸಿಎಂ ಮಾಡುವುದು ಹೇಗೆ ಎಂದು ಕೈ ತೊಳೆದುಕೊಳ್ಳಬಹುದು. ಕಳೆದ ಚುನಾವಣೆಯಲ್ಲಿ ಸೋತ ಡಾ.ಜಿ.ಪರಮೇಶ್ವರ ಅವರನ್ನು ಕಾಂಗ್ರೆಸ್ಸಿನಲ್ಲಿ ಮೂಲೆಗುಂಪು ಮಾಡಿದಂತೆ. ಯಡಿಯೂರಪ್ಪನವರಿಗೆ ಈಗ 76 ವರ್ಷವಾಗುತ್ತಾ ಬಂದಿದೆ. ವಯಸ್ಸು ಮತ್ತು ಆರೋಗ್ಯ ಹಳೇ ಹುಮ್ಮಸ್ಸನ್ನು ನುಂಗಿದೆ. ಹೀಗಾಗಿ ಅವರಿಗೆ ಎಲ್ಲ ಪ್ರಾಮುಖ್ಯತೆ ಕೊಟ್ಟಂತೆ ತೋರಿಸಿ, ಪಕ್ಷದಲ್ಲಿ ಬಲಹೀನರನ್ನಾಗಿ ಮಾಡುವುದು ಒರಿಜಿನಲ್ ಯೋಜನೆ. ಈ ಯೋಜನೆಯ ರುವಾರಿ ಯಡಿಯೂರಪ್ಪನವರ ಒಳವಿರೋಧಿ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ !

ವರಿಷ್ಠರಿಗೂ ಗೊತ್ತು. ಒಮ್ಮೆ ಯಡಿಯೂರಪ್ಪನವರ ಕೈಗೆ ಅಧಿಕಾರ ಸಿಕ್ಕರೆ ಅವರು ಯಾರ ಮಾತೂ ಕೇಳುವುದಿಲ್ಲ. ವರಿಷ್ಠರನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು. ಇತ್ತೀಚೆಗೆ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪ ಬೆಂಬಲಿಗರಿಗೆ ಯಾರಿಗೂ ಅವಕಾಶ ನೀಡದೆ ಅನಂತಕುಮಾರ್ ಹೆಗಡೆಯವರನ್ನು ಅನಿರೀಕ್ಷಿತವಾಗಿ ಮಂತ್ರಿ ಮಾಡಿದ್ದರ ಹಿಂದೆಯೂ ಅವರನ್ನು ಕಟ್ಟಿಹಾಕುವ ತಂತ್ರವಿದೆ. ಉತ್ತರ ಕರ್ನಾಟಕ ಭಾಗದ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸುವುದು. ಈಗಾಗಲೇ ಆ ಭಾಗದ ಹತ್ತು ಹಲವು ಮುಖಂಡರು ತಮ್ಮ-ತಮ್ಮ ಪಕ್ಷದ ಉನ್ನತಸ್ತರದ ನಾಯಕರಿಗೆ ಕ್ಷೇತ್ರ ಬಿಟ್ಟುಕೊಡಲು ತಾಮುಂದು, ನಾಮುಂದು ಎಂದು ಶಕ್ತಿ ಮೀರಿ ಪ್ರಯತ್ನ ಮಾಡಿದ್ದಾರೆ.

ಪಕ್ಷದ ರಾಷ್ಟ್ರೀಯ ನಾಯಕರಾದ ಅಮಿತ್ ಶಾ ಅವರು ಉತ್ತರ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೊಟ್ಟ ಸಲಹೆಯನ್ನು ಒಲ್ಲದ ಮನಸ್ಸಿನಿಂದಲೇ ಅಪ್ಪಿಕೊಂಡಿದ್ದ ಯಡಿಯೂರಪ್ಪನವರು ಇದೀಗ ತಮ್ಮ ಮೂಗಿಗೆ ಬೇರಾವುದೋ ಕೆಟ್ಟ ವಾಸನೆ ಅಡರಿದ ಪರಿಣಾಮ ಹಿಂದೇಟು ಹಾಕುತ್ತಿದ್ದಾರೆ. ಬೇರೆಲ್ಲರ ಹೆಸರು ತೋರಿಸಿ ತಮ್ಮೊಬ್ಬರನ್ನೇ ಮಾತ್ರ ಕ್ಷೇತ್ರ ಬದಲಾವಣೆ ಖೆಡ್ಡಾಕ್ಕೆ ಕೆಡವುವ ಹುನ್ನಾರ ಬಲವಾಗಿ ಕಾಡಿರುವ ಕಾರಣ ಸ್ವಂತ ಕ್ಷೇತ್ರ ಶಿಕಾರಿಪುರದಿಂದಲೇ ಸ್ಪರ್ಧಿಸಲು ಒಲವು ತೋರಿದ್ದಾರೆ.

ಯಡಿಯೂರಪ್ಪನವರು ಈವರೆಗೂ ವೀರಶೈವ ಮತ್ತು ಲಿಂಗಾಯತ ಎರಡೂ ಗುಂಪುಗಳ ಅನಭಿಷಕ್ತ ನಾಯಕರಾಗಿ ಬಿಂಬಿತರಾಗಿದ್ದರು. ಆದರೆ ಈಗ ಅಲ್ಲೊಂದು ಚೂರು ಅಂತರ ಏರ್ಪಟ್ಟಿದೆ. ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ತುಮಕೂರು ಸಿದ್ಧಗಂಗಾ ಮಠದ ಶ್ರೀಗಳ ಬೆಂಬಲ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಇದೆ ಎಂದು ಘೋಷಣೆ ಮಾಡಿದ ನಂತರ ಮಠಕ್ಕೆ ತರಾತುರಿಯಲ್ಲಿ ಭೇಟಿಯಿತ್ತ ಯಡಿಯೂರಪ್ಪನವರು ಅದಕ್ಕೆ ವ್ಯತಿರಿಕ್ತ ಹೇಳಿಕೆ ಹೊರಬೀಳುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ವೀರಶೈವರಿಗೆ ಹೋಲಿಸಿದಾಗ ಲಿಂಗಾಯತ ಬಣ ಸಂಖ್ಯೆಯಲ್ಲಿ ಹೆಚ್ಚಿದೆ. ಈ ಎಲ್ಲವನ್ನೂ ಆಧರಿಸಿಯೇ ಯಡಿಯೂರಪ್ಪ ವಿರುದ್ಧ ರಣತಂತ್ರವೊಂದನ್ನು ಬಿಜೆಪಿ ಒಳಗೇ ಹೆಣೆಯಲಾಗಿದೆ.Elec

ಈಗಾಗಲೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಘೋಷಿಸಿದ ಯುಗಾದಿ ಹಬ್ಬದ ದಿನವೇ ಬಿಂಬಿಸಲಾಗಿದೆ. ಶಿಕಾರಿಪುರದಲ್ಲಿ ಸ್ಪರ್ಧಿಸಿದರೆ ಯಡಿಯೂರಪ್ಪನವರ ಗೆಲವು ಕೇಕ್‍ವಾಕ್. ಅವರು ಹೆಚ್ಚಿಗೆ ತಲೆ ಕೆಡಿಸಿಕೊಳ್ಳುವಂತೆಯೇ ಇಲ್ಲ. ಈಶ್ವರಪ್ಪ ಮತ್ತು ಅವರ ನಡುವೆ ಏನೇ ವೈಮನಸ್ಯ ಇದ್ದರೂ ಶಿಕಾರಿಪುರದಲ್ಲಿ ಅವರ ಗೆಲುವನ್ನು ಅಷ್ಟು ಸುಲಭವಾಗಿ ತಳ್ಳಿಹಾಕಲಾಗುವುದಿಲ್ಲ.

Facebook Comments

Sri Raghav

Admin