ಇಂಡೋ-ಚೀನಾ ಭಾಯಿ ಭಾಯಿ : ವೈರತ್ವ ಬಿಟ್ಟು ಸ್ನೇಹಹಸ್ತ ಚಾಚಿದ ಚೀನಿಯರು

ಈ ಸುದ್ದಿಯನ್ನು ಶೇರ್ ಮಾಡಿ

India-and-China-001

ನವದೆಹಲಿ, ಅ.1- ಈಶಾನ್ಯ ರಾಜ್ಯ ಸಿಕ್ಕೀಂನ ಡೋಕ್ಲಾಂ ವಲಯದಲ್ಲಿ ಭಾರತ ಮತ್ತು ಚೀನಾ ನಡುವೆ ತಲೆದೋರಿದ್ದ ದೀರ್ಘಕಾಲದ ಬಿಕ್ಕಟ್ಟು ಬಗೆಹರಿದಿದ್ದು, ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಚಾಣಾಕ್ಷ ನಡೆಯಿಂದಾಗಿ ಏಷ್ಯಾದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾದ ಚೀನಾ ಇದೀಗ ಭಾರತದ ಸ್ನೇಹಕ್ಕಾಗಿ ಹಾತೊರೆಯುತ್ತಿದೆ. ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿಂಗ್‍ಪಿನ್ ನಡುವೆ ಇತ್ತೀಚೆಗೆ ನಡೆದ ಮಾತುಕತೆ ಫಲಪ್ರದವಾದ ನಂತರ ಬೀಜಿಂಗ್ ಇದೀಗ ಅತ್ಯಂತ ಪ್ರಜ್ಞಾ ಪೂರ್ವಕವಾಗಿ ವರ್ತಿಸುತ್ತಿದ್ದು, ಭಾರತದೊಂದಿಗೆ ಪೂರಕ ಸ್ನೇಹ ಸಂಬಂಧ ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಹಿಟ್ಟಿರುವುದು ಉಭಯ ದೇಶಗಳ ಪ್ರಗತಿಗೆ ಆಶಾದಾಯಕ ಬೆಳವಣಿಗೆಯಾಗಿದೆ.

ಡೋಕ್ಲಾಂ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ವಿರುದ್ಧ ವಿದ್ವೇಶದ ಕತ್ತಿ ಮಸೆಯುತ್ತಿದ್ದ ಚೀನಾ ಪ್ರಧಾನಿ ಅವರು ನರೇಂದ್ರ ಮೋದಿ ಅವರ ಜಾಣತನ ಹೆಜ್ಜೆ ಮತ್ತು ನಂತರದ ಬೆಳವಣಿಗೆಯಿಂದಾಗಿ ತಣ್ಣಗಾಗಿತ್ತು. ಚೀನಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆ ಸಂದರ್ಭದಲ್ಲಿ ಮೋದಿ ಮತ್ತು ಚೀನಿ ಅಧ್ಯಕ್ಷ ಜಿಂಗ್‍ಪಿನ್ ನಡುವಣ ಮಾತುಕತೆ ಫಲಪ್ರದವಾಗಿ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಗೆ ಕಾರಣವಾಗಿತ್ತು.

ಈ ಬೆಳವಣಿಗೆಗಳ ಕೆಲವು ವಾರಗಳ ನಂತರ ಬೀಜಿಂಗ್ ತನ್ನ ವೈರತ್ವ ಧೋರಣೆಯನ್ನು ಮೂಲೆಗುಂಪು ಮಾಡಿ ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧಕ್ಕಾಗಿ ಕೈ ಚಾಚಿದೆ. ಇದಕ್ಕೆ ಪುಷ್ಠಿ ನೀಡುವಂತೆ ತನ್ನ ಅರೆ ಸರ್ಕಾರಿ ಮುಖವಾಣಿಯಾದ ಗ್ಲೋಬಲ್ ಟೈಮ್ಸ್ ಸೇರಿದಂತೆ ಭಾರತ ಮತ್ತು ಚೀನಾದ ಪತ್ರಿಕೆಯಲ್ಲಿ ಭಾರತದೊಂದಿಗೆ ಸದೃಢ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಜಾಹೀರಾತು ಪ್ರಕಟಿಸಿದ್ದು, ಮೋದಿ ಮತ್ತು ಜಿನ್‍ಪಿಂಗ್ ಅವರ ಸಂದೇಶಗಳನ್ನು ದಾಖಲಿಸಿವೆ.

ಪಾಕಿಸ್ತಾನದ ಬೆಂಬಲದೊಂದಿಗೆ ಭಾರತದ ಮೇಲೆ ದೊಡ್ಡ ಮಟ್ಟದ ದಾಳಿ ನಡೆಸುವುದಾಗಿ ಬೆದರಿಸುತ್ತಿದ್ದ ಚೀನಾದ ಹಠಾತ್ ನಿಲುವು ಅಚ್ಚರಿಯಾಗಿದ್ದರೂ ಇಂಡೋ-ಚೀನಾ ಸಂಬಂಧವೃದ್ಧಿಯಲ್ಲಿ ಮಹತ್ವದ ಸಂಗತಿಯಾಗಿದೆ. ಏಷ್ಯಾದ ಎರಡು ಅತ್ಯಂತ ಪ್ರಬಲ ಶಕ್ತಿಶಾಲಿ ರಾಷ್ಟ್ರಗಳಾದ ಭಾರತ ಮತ್ತು ಚೀನಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಪ್ರಗತಿಯಿಂದ ಗುರುತಿಸಿಕೊಂಡಿದ್ದು, ಎರಡೂ ದೇಶಗಳ ಸಂಬಂಧ ಮತ್ತಷ್ಟು ಬಲವರ್ಧನೆಗೊಂಡಲ್ಲಿ ಅದು ವಿಶ್ವದ ಬೆಳವಣಿಗೆಗೂ ಅತ್ಯಂತ ಪೂರಕವಾಗಲಿದೆ ಎಂದು ಚೀನಾ ತನ್ನ ಮುಖವಾಣಿಯಲ್ಲಿ ಬಣ್ಣಿಸಿದೆ.

Facebook Comments

Sri Raghav

Admin