ಹುಟ್ಟುಹಬ್ಬದ ಸಂಭ್ರಮದಲ್ಲಿರುವ ರಾಷ್ಟ್ರಪತಿಗೆ ಗಣ್ಯರಿಂದ ಶುಭಾಶಯ

ಈ ಸುದ್ದಿಯನ್ನು ಶೇರ್ ಮಾಡಿ

Ramanath-Kovind

ನವದೆಹಲಿ, ಅ.1- ಭಾರತದ 14ನೇ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಅನೇಕ ಗಣ್ಯರು ಶುಭ ಕೋರಿದಾರೆ. ಇನ್ನೂ ಅನೇಕ ಗಣ್ಯರು ಸಹ ರಾಷ್ಟ್ರಪತಿಯವರಿಗೆ ಟ್ವೀಟರ್‍ನಲ್ಲಿ ಶುಭ ಹಾರೈಸಿದ್ದಾರೆ.   ಜುಲೈ 20ರಂದು ರಾಷ್ಟ್ರಪತಿಯಾಗಿ ಕೋವಿಂದ್ ಚುನಾಯಿತರಾಗಿದ್ದರು. ಇವರು ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಿದ ಬಿಜೆಪಿಯ ಮೊದಲ ಹಾಗೂ ದಲಿತ ಸಮುದಾಯದ ಎರಡನೇ ನಾಯಕರಾಗಿದ್ದಾರೆ.

Facebook Comments

Sri Raghav

Admin