520 ಮಂದಿ ಪ್ರಯಾಣಿಕರಿದ್ದ ಏರ್ ಫ್ರಾನ್ಸ್ ವಿಮಾನ ತುರ್ತು ಭೂಸ್ಪರ್ಶ

ಈ ಸುದ್ದಿಯನ್ನು ಶೇರ್ ಮಾಡಿ

Air-France--02

ಪ್ಯಾರಿಸ್, ಅ.1- ಎಂಜಿನ್‍ಗೆ ಆದ ತೀವ್ರ ಹಾನಿಯಿಂದಾಗಿ, 520 ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯುತ್ತಿದ್ದ ಏರ್ ಫ್ರಾನ್ಸ್ ಎ-380 ಸೂಪರ್ ಜಂಬೋ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಕೆನಡಾದಲ್ಲಿ ಇಂದು ನಡೆದಿದೆ. ಫ್ರಾನ್ಸ್ ರಾಜಧಾನಿ ಪ್ಯಾರಿಸ್‍ನಿಂದ ಅಮೆರಿಕದ ಲಾಸ್ ಏಂಜೆಲ್ಸ್‍ಗೆ ಈ ವಿಮಾನ ಹಾರುತ್ತಿದ್ದಾಗ ತನ್ನ ಎಂಜಿನ್‍ಗಳಲ್ಲಿ ಒಂದು ಯಂತ್ರದಲ್ಲಿ ಗಂಭೀರ ಸಮಸ್ಯೆ ಕಾಣಿಸಿಕೊಂಡಿತು. ಈ ವಿಮಾನದಲ್ಲಿ 496 ಪ್ರಯಾಣಿಕರು ಮತ್ತು 24 ವಿಮಾನ ಸಿಬ್ಬಂದಿ ಇದ್ದರು.

ಮಾರ್ಗ ಮಧ್ಯೆ ಈ ಗಂಭೀರ ಸಮಸ್ಯೆ ಕಂಡುಬಂದಿದ್ದರಿಂದ ಎಚ್ಚೆತ್ತ ಪೈಲೆಟ್‍ಗಳು ಕೆನಡಾದ ಗೂಸ್ ಬೇ ಮಿಲಿಟರಿ ವಾಯುನೆಲೆಯಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದರು. ತಕ್ಷಣ ಸೇನಾ ಸಿಬ್ಬಂದಿ ನೆರವಿನೊಂದಿಗೆ ವಿಮಾನದಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಕೆಳಗೆ ಇಳಿಸಲಾಯಿತು. ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲವಾದರೂ, ಆತಂಕದಿಂದ ಕೆಲ ಪ್ರಯಾಣಿಕರು ಗಾಬರಿಗೆ ಒಳಗಾಗಿದ್ದರು.

Facebook Comments

Sri Raghav

Admin