ಆಸ್ಪತ್ರೆಯಿಂದ ಹೆಚ್ಡಿಕೆ ಡಿಸ್ಚಾರ್ಜ್, 1 ತಿಂಗಳು ರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Kumaraswamy--021

ಬೆಂಗಳೂರು, ಅ.2- ಹಂತ ಹಂತವಾಗಿ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದೇನೆ. ವೈದ್ಯರ ಉತ್ತಮ ಆರೈಕೆಯಿಂದ ನಿರೀಕ್ಷೆಗೂ ಮೀರಿ ಚೇತರಿಸಿಕೊಳ್ಳುತ್ತಿದ್ದೇನೆ. ಒಂದು ತಿಂಗಳು ಜನರು ನನಗೆ ವಿಶ್ರಾಂತಿಗೆ ಅವಕಾಶ ಮಾಡಿಕೊಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಸೆ.23ರಂದು ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇಂದು ಆಸ್ಪತ್ರೆಗೆ ಡಿಸ್ಚಾರ್ಜ್ ಆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈದ್ಯರು ಒಂದು ತಿಂಗಳು ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದ್ದಾರೆ. ಜನರ ಭೇಟಿಯಿಂದ ಮತ್ತೆ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದಕ್ಕಾಗಿ ದಯವಿಟ್ಟು ಒಂದು ತಿಂಗಳು ಯಾರೂ ಭೇಟಿಗೆ ಬರಬೇಡಿ. ನಿಮ್ಮ ಅಭಿಮಾನ, ಪ್ರೀತಿ ನಿಮ್ಮ ಹೃದಯದಲ್ಲೇ ಇರಲಿ. ವಿಶ್ರಾಂತಿ ಪಡೆದು ಬಂದ ನಂತರ ನಿಮ್ಮೆಲ್ಲರನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದರು.

ನಾನು ಸರಿಯಾದ ಸಮಯಕ್ಕೆ ಊಟ ತೆಗೆದುಕೊಳ್ಳುತ್ತಿರಲಿಲ್ಲ. ಹಾಗಾಗಿ ಆರೋಗ್ಯದಲ್ಲಿ ವ್ಯತ್ಯಯವಾಗಿತ್ತು, ಇನ್ನು ಮುಂದೆ ಸರಿಯಾದ ಸಮಯಕ್ಕೆ ಆಹಾರ ತೆಗೆದುಕೊಳ್ಳಬೇಕಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ಕುಮಾರಸ್ವಾಮಿಯವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಎಚ್‍ಡಿಕೆ ಅವರು ಈಗ ಚೆನ್ನಾಗಿದ್ದಾರೆ. ಅವರಿಗೆ ಆಯಾಸ ಆಗದಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಆಹಾರ ಕೊಡಬೇಕು. 9 ಗಂಟೆಗೆ ತಿಂಡಿ, 1.30ಕ್ಕೆ ಊಟ, ಸಂಜೆ ಟೀ, ಕಾಫಿ, ಬಿಸ್ಕೆಟ್ ತೆಗೆದುಕೊಳ್ಳಬೇಕು. ರಾತ್ರಿ 9 ಗಂಟೆಗೆ ಊಟ ಆಗಬೇಕು. 25 ದಿನಗಳ ವಿಶ್ರಾಂತಿ ನಡುವೆ ವೈದ್ಯರು ಮನೆಗೆ ಬಂದು ತಪಾಸಣೆ ನಡೆಸಲಿದ್ದಾರೆ ಎಂದು ಹೇಳಿದರು.

Facebook Comments

Sri Raghav

Admin