ಚಲುವಿನ ಚಿತ್ತಾರ ಚಿತ್ರದಲ್ಲಿ ‘ಬುಲ್ಲಿ’ ಎಂದೇ ಫೇಮಸ್ ಆಗಿದ್ದ ರಾಕೇಶ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Bulli

ಬೆಂಗಳೂರು. ಅ.02 : ಎಸ್. ನಾರಾಯಣ್ ನಿರ್ದೇಶನದ ‘ಚೆಲುವಿನ ಚಿತ್ತಾರ’ದಲ್ಲಿ ಬಾಲನಟರಾಗಿ ಅಭಿನಯಿಸಿದ್ದ ನಟ ರಾಕೇಶ್(21) ಅನಾರೋಗ್ಯದಿಂದ ನಿಧನರಾಗಿದ್ದಾರೆ.   ಬಾಲನಟ ರಾಕೇಶ್ ಅವರು ಗ್ಯಾಂಗ್ರಿನ್ ಸಮಸ್ಯೆ ಮತ್ತು ಕರುಳು ಕಾನ್ಸರ್ ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬುಲ್ಲಿ ಪಪ್ಪುಸಿ ಅನ್ನೋ ಹೆಸರಿನಿಂದ ರಾಕೇಶ್ ಫೇಮಸ್ ಆಗಿದ್ದರು.

2 ತಿಂಗಳ ಹಿಂದೆ ಆಪರೇಷನ್ ಮಾಡಲಾಗಿತ್ತು. ತದನಂತರ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಗೆ ರಾಕೇಶ್ ನ್ನು ದಾಖಲು ಮಾಡಲಾಗಿತ್ತು. ಆದರೆ ಇಂದು ಸಂಜೆ 7.30ರ ವೇಳೆಗೆ ರಾಕೇಶ್ ಅವರಿಗೆ ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾಗಿದ್ದಾರೆ. ಆಶಾರಾಣಿ ಅವರ ಪುತ್ರನಾಗಿರುವ ರಾಕೇಶ್ ಸದ್ಯ ಧೂಮಪಾನ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದರು. ‘ಚೆಲುವಿನ ಚಿತ್ತಾರ’ ‘ಮೊದಲ ಸಲ’, ‘ಭಜರಂಗಿ’, ‘ಚಂಡ’ ಮೊದಲಾದ ಚಿತ್ರಗಳಲ್ಲಿ ರಾಕೇಶ್ ಅಭಿನಯಿಸಿದ್ದರು.

Facebook Comments

Sri Raghav

Admin