ಜಯಾ ಆಸ್ಪತ್ರೆ ವೀಡಿಯೊ ಶಶಿಕಲಾ ಬಳಿ ಇದೆ : ದಿನಕರನ್

ಈ ಸುದ್ದಿಯನ್ನು ಶೇರ್ ಮಾಡಿ

dinakaran

ಚೆನ್ನೈ, ಅ.2-ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಸಾವಿನ ಹಿಂದಿರುವ ನಿಜಾಂಶ ತಿಳಿಯಲು ರಾಜ್ಯ ಸರ್ಕಾರ ತನಿಖೆ ನಡೆಸುತ್ತಿರುವ ಸಂದರ್ಭದಲ್ಲೇ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದೃಶ್ಯಗಳ ವಿಡಿಯೋ ಜಯಾ ಅವರ ಪರಮಾಪ್ತೆ ವಿ.ಕೆ ಶಶಿಕಲಾ ಅವರ ಬಳಿ ಇದೆ ಎಂದು ಎಐಎಡಿಎಂಕೆಯ ವಿಭಜಿತ ಬಣದ ಮುಖಂಡ ಟಿ.ಟಿ.ವಿ. ದಿನಕರನ್ ಹೇಳಿದ್ದಾರೆ.

ಚೆನ್ನೈನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಚೆನ್ನೈನ ಅಪಾಪೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರು ಹೇಗಿದ್ದರು, ಅವರಿಗೆ ಯಾವ ಚಿಕಿತ್ಸೆಗಳನ್ನು ನೀಡಲಾಗುತ್ತಿತ್ತು ಹಾಗೂ ಹೇಗೆ ಉಪಚರಿಸಲಾಗುತ್ತಿತ್ತು ಎಂಬ ವೀಡಿಯೋ ಶಶಿಕಲಾ ಅವರ ಬಳಿ ಇದೆ. ಇದನ್ನು ತನಿಖೆ ನಡೆಸುತ್ತಿರುವ ತಂಡಕ್ಕೆ ನೀಡಲು ಸಿದ್ಧ ಎಂದು ತಿಳಿಸಿದರು.  ಚಿಕಿತ್ಸೆ ಫಲಕಾರಿಯಾಗದೇ ಜಯಾ ಅವರು ನಿಧನರಾದರು. ಇದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳ ವೀಡಿಯೋ ಇದೆ. ಅದನ್ನು ತನಿಖಾ ತಂಡಕ್ಕೆ ನೀಡಿ ವಿಚಾರಣೆಗೆ ಸಹಕರಿಸಲು ಸಿದ್ದ ಎಂದು ಹೇಳಿದರು.

Facebook Comments

Sri Raghav

Admin