ಬೆಳಗಾವಿ ಪಾಲಿಕೆ ಮಾಜಿ ಉಪಮೇಯರ್ ಅವರ ಅತ್ತೆ-ಮಾವ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Belagavi-Suidice--02

ಬೆಳಗಾವಿ, ಅ.2- ಮಹಾನಗರ ಪಾಲಿಕೆ ಮಾಜಿ ಉಪಮೇಯರ್ ರೇಣು ಕಿಲ್ಲೇಕರ್ ಅವರ ಅತ್ತೆ-ಮಾವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ. ನ್ಯೂ ಗೂಡ್‍ಶೆಡ್ ರಸ್ತೆಯ ಅಪಾರ್ಟ್‍ಮೆಂಟ್‍ನಲ್ಲಿ ನಾರಾಯಣ್ ಕಿಲ್ಲೇಕರ್ (70), ವಸುಂಧರಾ ಕಿಲ್ಲೇಕರ್ (50) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕೆ ಕಡೆಬಜಾರ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಾಜಿ ಉಪಮೇಯರ್ ಅವರ ಅತ್ತೆ-ಮಾವ ಏಕಕಾಲಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

Facebook Comments

Sri Raghav

Admin