ಸಿಡಿಲು ಸಹಿತ ಸುರಿದ ಭಾರೀ ಮಳೆಗೆ 15 ಕುರಿಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಚಳ್ಳಕೆರೆ, ಅ.3-ರಾತ್ರಿ ಸಿಡಿಲು ಸಹಿತ ಸುರಿದ ಭಾರೀ ಮಳೆಗೆ 15 ಕುರಿಗಳು ಬಲಿಯಾಗಿದ್ದು, 15 ಕುರಿಗಳು ಹಾಗೂ ಎರಡು ಹಸುಗಳು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಚಳ್ಳಕೆರೆ ತಾಲೂಕಿನ ಭರಮಸಾಗರ ಗ್ರಾಮದ ಓಬ್ಬಯ್ಯ ಎಂಬುವರಿಗೆ ಸೇರಿದ 15 ಕುರಿಗಳು ಸಿಡಿಲಿಗೆ ಸಾವನ್ನಪ್ಪಿದ್ದು, ದುರ್ಗಾವರ ಗ್ರಾಮದಲ್ಲಿ ನಾಗರಾಜು ಎಂಬುವರ ಮನೆ ಪಕ್ಕದಲ್ಲಿ ಹಳ್ಳವೊಂದು ಇದ್ದು, ಅದರ ಪಕ್ಕದಲ್ಲಿ ಹಸು ಹಾಗೂ ಕುರಿಗಳನ್ನು ಕಟ್ಟಿ ಹಾಕಿದ್ದರು.

ರಾತ್ರಿ ಸುರಿದ ಭಾರೀ ಮಳೆಯಿಂದಾಗಿ 15 ಕುರಿಗಳು ಹಾಗೂ ಎರಡು ಹಸುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

Sri Raghav

Admin