ಆಫ್ರಿಕಾ ಪ್ರವಾಸದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್

ಈ ಸುದ್ದಿಯನ್ನು ಶೇರ್ ಮಾಡಿ

Ram-Nath-Kovind--02

ಜಿಬೌಟಿ ಸಿಟಿ, ಅ.4-ಭಾರತದ ಪ್ರಗತಿಯು ಸಹಭಾಗಿತ್ವಕ್ಕಾಗಿ ಹೊಸ ಅವಕಾಶಗಳಿಗೆ ರಹದಾರಿಯಾಗಿದೆ. ಭಾರತ ಮತ್ತು ವಿಶ್ವದ ನಡುವೆ ಸಂಪರ್ಕ ಸೇತುವೆ ಕಲ್ಪಿಸಲು ವಿದೇಶಿ ನೆಲದಲ್ಲಿರುವ ಭಾರತೀಯರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ. ಆಫ್ರಿಕಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಜಿಬೌಟಿ ಸಿಟಿಯಲ್ಲಿ ನಿನ್ನೆ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿ ಭಾರತದ ಏರುಮುಖ ಪ್ರಗತಿ ಬಗ್ಗೆ ಪ್ರಸ್ತಾಪಿಸಿ, ವಿದೇಶಗಳ ಸಹಭಾಗಿತ್ವಕ್ಕೆ ಇದು ಹೊಸ ಹೊಸ ಅವಕಾಶಗಳಿಗೆ ನಾಂದಿಯಾಗಿದೆ ಎಂದು ಬಣ್ಣಿಸಿದರು. ನಾವು ಎಲ್ಲೇ ಇರಲಿ ನಮ್ಮ ಮೂಲ ಬೇರುಗಳನ್ನು ನಾವು ನಿರ್ಲಕ್ಷ್ಯಿಸಬಾರದು ಅಥವಾ ತ್ಯಜಿಸಬಾರದು ಎಂದು ಅವರು ಭಾರತೀಯ ಸಮುದಾಯಕ್ಕೆ ಕರೆ ನೀಡಿದರು.

ಜಿಬೌಟಿ ಮತ್ತು ಇಥಿಯೋಪಿಯಾ ದೇಶಗಳಲ್ಲಿ ನಾಲ್ಕು ದಿನಗಳ ಪ್ರವಾಸಕ್ಕಾಗಿ ನಿನ್ನೆ ಜಿಬೌಟಿ ಸಿಟಿಗೆ ಆಗಮಿಸಿದರು. ಈ ದೇಶಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಮುಖಂಡರು ಎಂಬ ಹೆಗ್ಗಳಿಕೆಗೆ ಕೋವಿಂದ್ ಪಾತ್ರರಾಗಿದ್ದಾರೆ. ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಇವರ ಪ್ರಥಮ ವಿದೇಶಿ ಪ್ರವಾಸವಾಗಿದೆ.

Facebook Comments

Sri Raghav

Admin