ಇಟ್ಟಿಗೆ ಕಾರ್ಖಾನೆ ಹೊಗೆಗೂಡು ಬಿದ್ದು ಅಜ್ಜ-ಅಜ್ಜಿ-ಮೊಮ್ಮಗ ದಾರುಣ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Bangarapet--02

ಬಂಗಾರಪೇಟೆ,ಅ.4-ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ಇಟ್ಟಿಗೆ ಕಾರ್ಖಾನೆ ಹೊಗೆಗೂಡು ಕುಸಿದು ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ತಾಲ್ಲೂಕಿನ ಗಡಿಭಾಗ ರಾಜಪೇಟೆಯಲ್ಲಿ ಸಂಭವಿಸಿದೆ. ಆಂಧ್ರಪ್ರದೇಶದ ಪಲಮನೇರು ಜಿಲ್ಲೆ ಜೆ.ಕೆ.ಪುರಂ ನಿವಾಸಿಗಳಾದ ಭಾಷಾ(60), ಫಾತಿಮಾ(50) ಮತ್ತು ಇವರ ಮೊಮ್ಮಗ ನಯಾಜ್(6) ಮೃತ ದುರ್ದೈವಿಗಳು. ಜಯರಾಜ್ ಎಂಬುವರಿಗೆ ಸೇರಿದ ಹಳೆ ಇಟ್ಟಿಗೆ ಕಾರ್ಖಾನೆಯಲ್ಲಿ ಭಾಷಾ ಮತ್ತು ಫಾತಿಮಾ ದಂಪತಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯ ಹೊಗೆಗೂಡಿನ ಪಕ್ಕದಲ್ಲೆ ಗುಡಿಸಲು ನಿರ್ಮಿಸಿಕೊಂಡು ಅದರಲ್ಲಿ ವಾಸ್ತವ್ಯವಿದ್ದರು. ಆರು ವರ್ಷದ ಮೊಮ್ಮಗನನ್ನು ತಮ್ಮ ಬಳಿಯಲ್ಲೇ ಇಟ್ಟುಕೊಂಡಿದ್ದರು.

ಮಳೆಯಿಂದಾಗಿ ರಾತ್ರಿ ಈ ಹೊಗೆಗೂಡು ಕುಸಿದು ಗುಡಿಸಲ ಮೇಲೆ ಬಿದ್ದಿದೆ. ಗುಡಿಸಲಿನಲ್ಲಿ ಮಲಗಿ ನಿದ್ರಿಸುತ್ತಿದ್ದ ಈ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಂಗಾರಪೇಟೆಯಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ರಾಜಪೇಟೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಆಂಡರ್‍ಸನ್‍ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin