ಚಾಮುಂಡಿ ಬೆಟ್ಟದಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ ಕಳ್ಳರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Chamundi-Temple--01 ಮೈಸೂರು, ಅ.4- ಚಾಮುಂಡಿ ಬೆಟ್ಟದಲ್ಲಿ ಭಕ್ತಾದಿಗಳ ಚಿನ್ನಾಭರಣ ಅಪಹರಿಸುತ್ತಿದ್ದ ಮೂವರು ಮಹಿಳೆಯರು ಸೇರಿದಂತೆ ಒಂದೇ ಕುಟುಂಬದ ನಾಲ್ಕು ಮಂದಿಯನ್ನು ನಗರದ ಕೆ.ಆರ್. ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಜಿಲ್ಲೆ ಸವದತ್ತಿ ವಾಸಿಗಳಾದ ನಾಗೇಶ ಭಜಂತ್ರಿ , ಈಶ್ವರಿ ಭಜಂತ್ರಿ, ಸತ್ಯಮ್ಮ ಭಜಂತ್ರಿ ಹಾಗೂ ಶೀಲಾ ಭಜಂತ್ರಿ ಬಂಧಿತ ಆರೋಪಿಗಳು. ಬಂಧಿತರಿಂದ ಪೊಲೀಸರು 40,000 ಮೌಲ್ಯದ ಚಿನ್ನದ ಸರ ಹಾಗೂ ಮೊಬೈಲ್ , ಒಂದು ಕ್ಯಾಮೆರಾವನ್ನು ವಶಪಡಿಸಿಕೊಂಡಿದ್ದಾರೆ.

ವಿಜಯದಶಮಿ ದಿನವಾದ ಸೆ.30ರಂದು ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಪಶ್ಚಿಮ ಬಂಗಾಳದ ಅರ್ಪಿಲ್ ಪಾಲ್ ಎಂಬುವವರ ಚಿನ್ನದ ಸರ ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಅವರು ಕೆ.ಆರ್.ಠಾಣೆಯಲ್ಲಿ ಅವರು ಪ್ರಕರಣ ದಾಖಲಿಸಿದ್ದರು. ಪೊಲೀಸರು ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಈ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.

Facebook Comments

Sri Raghav

Admin