ತಮಿಳುನಾಡು ವಿಧಾನಸಭಾಧ್ಯಕ್ಷರಿಗೆ ಹೈಕೋರ್ಟ್ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

Tamilnadu-HighCourt--02

ಚೆನ್ನೈ,ಅ.4-ಪಕ್ಷಾಂತರ ನಿಷೇಧ ಕಾನೂನಿನಡಿ ಎಐಎಡಿಎಂಕೆ ಭಿನ್ನ ಬಣದ ನಾಯಕ ಟಿ.ಟಿ.ವಿ.ದಿನಕರನ್ ಪರವಾಗಿರುವ ಶಾಸಕರ ಅನರ್ಹ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ವಿಧಾನಸಭಾಧ್ಯಕ್ಷ ಧನಪಾಲ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ವಿಶ್ವಾಸ ಮತಯಾಚನೆ ವೇಳೆ ಅನರ್ಹಗೊಂಡ 11 ಶಾಸಕರು ಈ ಕ್ರಮವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‍ನ ಮೊರೆ ಹೋಗಿದ್ದರು. ಈ ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಸ್ಪೀಕರ್ ಅವರಿಗೆ ನೋಟಿಸ್ ನೀಡಿ ಪ್ರತ್ಯುತ್ತರ ನೀಡುವಂತೆ ಸೂಚಿಸಿದೆ.

Facebook Comments

Sri Raghav

Admin