ಅಬ್ಬರಿಸುತ್ತಿದ್ದಾನೆ ವರುಣ, ಮುಳುಗಿದ ಬೆಂಗಳೂರು, ಜನಜೀವನ ಸಂಪೂರ್ಣ ಅಸ್ತವ್ಯಸ್ತ

ಈ ಸುದ್ದಿಯನ್ನು ಶೇರ್ ಮಾಡಿ

05102017-Bangalore- Water logged due to heavy rain in front of Vidhana Soudha in Bengaluru on Thursday.

ಬೆಂಗಳೂರು,ಅ.5-ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆರಾಯ ಅಬ್ಬರಿಸಿದ್ದಾನೆ. ಇಂದು ಮಧ್ಯಾಹ್ನದಿಂದ ಗುಡುಗು ಸಹಿತ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ನಗರದೆಲ್ಲೆಡೆ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಗಿದೆ. ರಾಜಧಾನಿಯಲ್ಲಿ 10ಕ್ಕೂ ಹೆಚ್ಚು ಕಡೆ ಭಾರೀ ಗಾತ್ರದ ಮರಗಳು ಉರುಳಿಬಿದ್ದಿವೆ. 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ಉಂಟಾಗಿದೆ.

ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭವಾದ ಮಳೆಗೆ ನಾಯಂಡಹಳ್ಳಿಯಲ್ಲಿ ಗೋಡೆಯೊಂದು ಕುಸಿದುಬಿದ್ದಿದೆ. ಮಳೆ ನೀರು ನಿಂತು ಕೆ.ಆರ್.ಸರ್ಕಲ್ ಅಕ್ಷರಶಃ ಕೆರೆಯಂತಾಗಿದೆ. ಮೆಜೆಸ್ಟಿಕ್, ಕೆ.ಆರ್.ಮಾರುಕಟ್ಟೆ , ಬಳ್ಳಾರಿ ರಸ್ತೆ, ಹೆಬ್ಬಾಳ ಸರ್ಕಲ್, ಆನಂದರಾವ್ ವೃತ್ತ, ಮೆಜೆಸ್ಟಿಕ್ ಸೇರಿದಂತೆ ಹಲವೆಡೆ ಸಂಚಾರ ದಟ್ಟಣೆ ಉಂಟಾಗಿ ದ್ವಿಚಕ್ರ ವಾಹನ ಸವಾರರು ಮಳೆಯಲ್ಲಿಯೇ ವಾಹನಗಳನ್ನು ನಿಲ್ಲಿಸಿಕೊಂಡು ಶಪಿಸುತ್ತಿದ್ದರು.

ವಾಹನ ಸಂಚಾರ ಸುಗಮಗೊಳಿಸಲು ಟ್ರಾಫಿಕ್ ಪೊಲೀಸರು ಹರಸಾಹಸಪಡುತ್ತಿದ್ದರು. ವರುಣನ ಅಬ್ಬರಕ್ಕೆ ಬೆಂಗಳೂರು ಮಹಾನಗರ ಮತ್ತೆ ತತ್ತರಿಸಿದೆ. ಕಳೆದ 15 ದಿನಗಳಿಂದ ನಿರಂತರವಾಗಿ ಸುರಿದ ಮಳೆಗೆ ಜನ ಮೆಚ್ಚಿಬಿದ್ದಿದ್ದರು.

05102017-Bangalore- Water logged due to heavy rain near Minsk Square in Bengaluru on Thursday.
ರಸ್ತೆಗಳೆಲ್ಲ ಹಾಳಾಗಿ ಗುಂಡಿಬಿದ್ದಿದ್ದು , ಹಲವರನ್ನು ಬಲಿ ತೆಗೆದುಕೊಂಡಿದ್ದವು. ಈಗ ಮತ್ತೆ ವರುಣನ ಆರ್ಭಟ ಹೆಚ್ಚಾಗಿದ್ದು , ಚರಂಡಿಗಳೆಲ್ಲ ತುಂಬಿ ಹರಿಯುತ್ತಿವೆ. ಮ್ಯಾನ್‍ಹೋಲ್‍ಗಳಲ್ಲಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತಿದೆ.

WhatsApp Image 2017-10-05 at 4.39.19 PM

ಎಂ.ಜಿ.ರಸ್ತೆ, ಶಿವಾನಂದ ವೃತ್ತ, ಎಲೆಕ್ಟ್ರಾನಿಕ್ ಸಿಟಿ, ಇಂದಿರಾನಗರ, ಮಹಾಲಕ್ಷ್ಮಿ ಲೇಔಟ ಸೇರಿದಂತೆ ಬಹುತೇಕ ರಸ್ತೆಗಳು ಜಲಾವೃತಗೊಂಡಿದ್ದವು. ನಗರದೆಲ್ಲೆಡೆ ವಿವಿಧ ಕಾಮಗಾರಿಗಳು ನಡೆಯುತ್ತಿರುವುದರಿಂದ ಭಾರೀ ಮಳೆಗೆ ಕಾಮಗಾರಿಗೆ ಅಡಚಣೆಯಾಗಿತ್ತು.

WhatsApp Image 2017-10-05 at 4.34.52 PM

ಯಾವ ಗುಂಡಿಗೆ ಬಲಿಯಾಗಬೇಕಾಗುತ್ತದೆಯೋ ಎಂಬ ಆತಂಕದಲ್ಲೇ ಸವಾರರು ವಾಹನ ಚಲಾಯಿಸಿದರು. ಗುಡುಗು-ಸಿಡಿಲಿನ ಆರ್ಭಟಕ್ಕೆ ನಗರದ ಜನತೆ ಬೆಚ್ಚಿ ಬಿದ್ದಿದ್ದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಮನೆ ತಲುಪಲು ಪರದಾಡುತ್ತಿದ್ದ ದೃಶ್ಯ ಕಂಡುಬಂತು.  ಹೆಚ್ಚು ನೀರು ತುಂಬಿದ್ದರಿಂದ ಹಲವೆಡೆ ಮ್ಯಾನ್‍ಹೋಲ್‍ಗಳು ಕೂಡ ತುಂಬಿದ್ದವು ಮಾರುಕಟ್ಟೆ ಪ್ರದೇಶಗಳಲ್ಲಿ ಗೂಡ್ಸ್ ವಾಹನಗಳು ನಿಂತಲೇ ನಿಂತಿದ್ದವು. ಬೊಮ್ಮನಹಳ್ಳಿ , ಮಡಿವಾಳ, ಎಚ್‍ಎಸ್‍ಆರ್ ಲೇಔಟ್ ಸೇರಿದಂತೆ ಅನೇಕ ಕಡೆ ನಿರಂತರ ಮಳೆಯಿಂದ ಜನ ತೊಂದರೆಗೀಡಾಗಿದ್ದರು.

WhatsApp Image 2017-10-05 at 4.34.48 PM

ರಸ್ತೆಬದಿಯ ಮನೆಗಳಿಗೆ ನೀರು ನುಗ್ಗಿದೆ. ತಗ್ಗುಪ್ರದೇಶದ ಮನೆಗಳಿಗೂ ಕೂಡ ನೀರು ನುಗ್ಗಿದೆ. ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಹಲವು ಕಾರ್ಯಕ್ರಮಗಳು ಮಧ್ಯಾಹ್ನವೇ ಸುರಿದ ಭಾರೀ ಮಳೆಗೆ ಸ್ಥಗಿತಗೊಂಡವು.   ವಿಧಾನಸೌಧದ ಮುಂದೆ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾವಿರಾರು ಜನ ಭಾರೀ ಮಳೆಯಿಂದ ದಿಕ್ಕಾಪಾಲಾಗಿ ಓಡಿಹೋದರು. ಮಳೆಯ ಕಾರಣ ನಿಗದಿಯಂತೆ ಕಾರ್ಯಕ್ರಮಗಳು ನಡೆಯಲಿಲ್ಲ.

WhatsApp Image 2017-10-05 at 4.39.17 PM

05102017-Bangalore- Water logged due to heavy rain near Minsk Square in Bengaluru on Thursday.
05102017-Bangalore- Water logged due to heavy rain near Minsk Square in Bengaluru on Thursday.

05102017-Bangalore- Water logged due to heavy rain near Minsk Square in Bengaluru on Thursday.
05102017-Bangalore- Water logged due to heavy rain near Minsk Square in Bengaluru on Thursday.

05102017-Bangalore- Heavy rain in the city affected people who attended Valmiki Jayanti at Vidhana Soudha in Bengaluru on Thursday.

WhatsApp Image 2017-10-05 at 5.03.18 PM WhatsApp Image 2017-10-05 at 5.03.20 PM

WhatsApp Image 2017-10-05 at 5.05.16 PM

WhatsApp Image 2017-10-05 at 5.05.23 PM

WhatsApp Image 2017-10-05 at 5.05.26 PM

WhatsApp Image 2017-10-05 at 5.05.31 PM

zzzzz

Facebook Comments

Sri Raghav

Admin