ಕೋಚ್ ರವಿಶಾಸ್ತ್ರಿಗೆ 1.20 ಕೋಟಿ ರೂ ಸಂದಾಯ ಮಾಡಿದ ಬಿಸಿಸಿಐ

ಈ ಸುದ್ದಿಯನ್ನು ಶೇರ್ ಮಾಡಿ

Ravishastri--01

ನವದೆಹಲಿ, ಅ.5- ಟೀಂ ಇಂಡಿಯಾದ ಮುಖ್ಯ ತರಬೇತುದಾರ ರವಿಶಾಸ್ತ್ರಿಗೆ ಬಿಸಿಸಿಐ 1.20 ಕೋಟಿ ರೂ.ಗಳನ್ನು ಸಂದಾಯ ಮಾಡಿದೆ. ಜೂನ್‍ನಲ್ಲಿ ಅನಿಲ್‍ಕುಂಬ್ಳೆ ಭಾರತ ತಂಡದ ತರಬೇತುದಾರನ ಹುದ್ದೆಯಿಂದ ಕೆಳಗಿಳಿದ ನಂತರ ಆ ಹುದ್ದೆಯನ್ನು ಅಲಂಕರಿಸಿದ ರವಿಶಾಸ್ತ್ರಿಗೆ ಅಂದಿನಿಂದಲೂ ವರಮಾನವನ್ನು ಸಂದಾಯ ಮಾಡಿರಲಿಲ್ಲ. ಪಾಕಿಸ್ತಾನದ ವಿರುದ್ಧ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್ ಪಂದ್ಯದ ಹೀನಾಯ ಸೋಲಿನ ನಂತರ ಭಾರತದ ನೂತನ ತರಬೇತುದಾರನಾಗಿ ಆಯ್ಕೆಯಾದ ರವಿಶಾಸ್ತ್ರಿಗೆ ಈಗ ಮೂರು ತಿಂಗಳ ಸಂಬಳದ ರೂಪದಲ್ಲಿ 1.20 ಕೋಟಿ ರೂ.ಗಳನ್ನು ಸಂದಾಯ ಮಾಡಲಾಗಿದೆ ಎಂದು ಬಿಸಿಸಿಐ ತನ್ನ ಅಧಿಕೃತ ವೈಬ್‍ಸೈಟ್ ಪ್ರಕಟಿಸಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಭಾರತ ತಂಡಕ್ಕೆ ಸಲ್ಲಿಸಿದ ಸೇವೆಗಾಗಿ ಮಹೇಂದ್ರ ಸಿಂಗ್ ಧೋನಿಗೆ 57 ಸಾವಿರ, ಚೇತೇಶ್ವರ್ ಪೂಜಾರ್‍ಗೆ 28 ಸಾವಿರ ಹಾಗೂ ರೂ. ಮತ್ತು ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (ಡಿಡಿಸಿಎ)ಯನ್ನು ರಣಜಿ ಹಾಗೂ ವಿಜಯ್‍ಹಜಾರೆ ಆಯೋಜನೆಗಾಗಿ ಕ್ರಮವಾಗಿ 69 ಸಾವಿರ ಮತ್ತು 56 ರೂ.ಗಳು ಸೇರಿದಂತೆ ಕ್ರಿಕೆಟ್ ಅಭಿವೃದ್ದಿಗೆ 25 ಲಕ್ಷಗಳನ್ನು ಮೀಸಲಿಡಲಾಗಿದೆ ಎಂದೂ ಬಿಸಿಸಿಐ ವೈಬ್‍ಸೈಟ್‍ನಲ್ಲಿ ಪ್ರಕಟಿಸಲಾಗಿದೆ.

Facebook Comments

Sri Raghav

Admin