ವಿಕಲಾಂಗ ಬಾಲಕಿ ಮೇಲೆ ಅತ್ಯಾಚಾರ

ಈ ಸುದ್ದಿಯನ್ನು ಶೇರ್ ಮಾಡಿ

Rape BSF--01

ತುಮಕೂರು,ಅ.6-ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ವಿಕಲಾಂಗ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ದು ಅತ್ಯಾಚಾರವೆಸಗಿ ಗ್ರಾಮಕ್ಕೆ ವಾಪಸ್ಸಾಗಿದ್ದ ಕಾಮುಕನನ್ನು ಪಾವಗಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾವಗಡದ 17 ವರ್ಷದ ವಿಕಲಾಂಗ ಬಾಲಕಿಯನ್ನು ಕರಾರು ಬಾಬು(21) ಎಂಬಾತ ಆಕೆಯನ್ನು ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಡಿದ್ದಾನೆ. ಮೊನ್ನೆ ಬೆಂಗಳೂರಿನಲ್ಲಿ ಮದುವೆ ಆಗೋಣ ಎಂದು ಈಕೆಯನ್ನು ನಂಬಿಸಿ ಕರೆದೊಯ್ದು ಹಗಲೆಲ್ಲ ಸುತ್ತಾಡಿಸಿ ರಾತ್ರಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಇತ್ತ ಮನೆಯವರು ಈ ಬಾಲಕಿಯ ಹುಡುಕಾಟ ನಡೆಸಿದ್ದಾರೆ. ನಿನ್ನೆ ಮುಂಜಾನೆ ಬಾಲಕಿ ಮನೆಗೆ ವಾಪಸ್ಸಾಗಿ ನಡೆದ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ. ಈಕೆಯ ತಾಯಿ ಪಾವಗಡ ಪೊಲೀಸರಿಗೆ ದೂರು ನೀಡಿದ್ದು , ಆರೋಪಿ ಕರಾರು ಬಾಬು ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

Facebook Comments

Sri Raghav

Admin