ಶಾಲೆಯಲ್ಲೇ 5 ಮಕ್ಕಳು ಮತ್ತು ಶಿಕ್ಷಕಿಯನ್ನು ಸುಟ್ಟು ಹಾಕಿದ ಗಾರ್ಡ್..!

ಈ ಸುದ್ದಿಯನ್ನು ಶೇರ್ ಮಾಡಿ

School-Fiire--01

ರಿಯೊ ಡಿ ಜನೈರೊ, ಅ.6- ಶಾಲೆಯ ಭದ್ರತಾ ಸಿಬ್ಬಂದಿಯೊಬ್ಬ ಶಾಲೆಯಲ್ಲೇ ಐವರು ನರ್ಸರಿ ಮಕ್ಕಳು ಮತ್ತು ಅವರ ಶಿಕ್ಷಕಿಯನ್ನು ಜೀವಂತವಾಗಿ ಸುಟ್ಟು ಹಾಕಿರುವ ಹೃದಯವಿದ್ರಾವಕ ಘಟನೆ ಬ್ರೆಜಿಲ್‍ನ ಮಿನಾಸ್ ಗೆರಾಯಿಸ್ ಪ್ರಾಂತ್ಯದ ಜನೌಬ ಎಂಬಲ್ಲಿ ನಡೆದಿದೆ. ಈ ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ಕೃತ್ಯ ಎಸಗಿದ ಸಿಬ್ಬಂದಿ ಸೇರಿದಂತೆ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಜನೌಬಾ ನಗರದಲ್ಲಿರುವ ಇನ್ನೋಸೆಂಟ್ ಪೀಪಲ್ ಎಂಬ ಶಾಲೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಇದ್ದಕ್ಕಿದ್ದಂತೆ ಮಕ್ಕಳು ಮತ್ತು ಶಿಕ್ಷಕಿಯ ಮೇಲೆ ಆಲ್ಕೋಹಾಲ್ ಸುರಿದು ಬೆಂಕಿ ಹೆಚ್ಚಿದ್ದಾನೆ. ಶಾಲಾ ಇತರ ಶಿಕ್ಷಕರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದು, ಅವರು ಸ್ಥಳಕ್ಕೆ ಬರುವಷ್ಟರಲ್ಲಿ ಮಕ್ಕಳು ಮತ್ತು ಶಿಕ್ಷಕಿ ಸಜೀವ ದಹನಗೊಂಡಿದ್ದಾರೆ. ಗಾರ್ಡ್ ಯಾವ ಉದ್ದೇಶಕ್ಕಾಗಿ ಈ ಕೃತ್ಯ ಎಸಗಿದ ಎಂಬುದು ತಿಳಿದು ಬಂದಿಲ್ಲ. ವಿಚಾರಿಸಲು ಅವನು ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin