ಅಸ್ಸಾಂ ಆಸ್ಪತ್ರೆಯಲ್ಲಿ 7 ನವಜಾತ ಶಿಶು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Baby--01

ಗೌಹಟಿ,ಅ.7-ಉತ್ತರಪ್ರದೇಶ ಮತ್ತು ಒರಿಸ್ಸಾದಲ್ಲಿ ಹಲವಾರು ನವಜಾತ ಶಿಶುಗಳು ಸಾವನ್ನಪ್ಪಿದ ಪ್ರಕರಣ ಹಸಿರಾಗಿರುವಾಗಲೇ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 22 ತಾಸುಗಳ ಅವಧಿಯಲ್ಲಿ ಏಳು ನವಜಾತ ಶಿಶುಗಳು ಮೃತಪಟ್ಟಿದ್ದು , ಬುಧವಾರ ಬೆಳಗ್ಗೆ 7.20ರಿಂದ 11 ಗಂಟೆ ಅವಧಿಯಲ್ಲಿ ಐದು ಮಕ್ಕಳು ನಂತರ ಎರಡು ದಿನಗಳಲ್ಲಿ ಇನ್ನೆರಡು ಶಿಶುಗಳು ಸಾವನ್ನಪ್ಪಿವೆ. ಇತರ ನಾಲ್ಕು ಶಿಶುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ಇಲ್ಲಿನ ಸರ್ಕಾರಿ ಸ್ವಾಮ್ಯದ ಫಕೃದ್ದೀನ್ ಅಲಿ ಅಹಮ್ಮದ್ ವೈದ್ಯಕೀಯ ಕಾಲೇಜಿನ ವೈದ್ಯರು ತಿಳಿಸಿದ್ದಾರೆ. ಶಿಶುಗಳ ಮರಣಕ್ಕೆ ಕಾರಣ ತಿಳಿದುಬಂದಿಲ್ಲ.

Facebook Comments

Sri Raghav

Admin