ಕತ್ತರಿಘಟ್ಟದಲ್ಲಿರುವ ಆಧ್ಯಾತ್ಮಿಕ ಕೇಂದ್ರಕ್ಕೆ ನಾಲ್ವರು ನಾಗಸಾಧುಗಳ ದಿಡೀರ್ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

Naga-Sadhu--02

ಹಿರೀಸಾವೆ, ಅ.7- ಚನ್ನರಾಯಪಟ್ಟಣ ತಾಲ್ಲೂಕು ಕತ್ತರಿಘಟ್ಟದಲ್ಲಿರುವ ಶ್ರೀ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರಕ್ಕೆ ನಾಲ್ವರು ನಾಗಸಾಧುಗಳು ದಿಡೀರ್ ಭೇಟಿ ನೀಡಿದರು. ಇವರನ್ನು ಕಂಡ ಗ್ರಾಮಸ್ಥರಲ್ಲಿ ಕೆಲಕಾಲ ಆತಂಕ, ಭಯದ ವಾತಾವರಣ ಸೃಷ್ಠಿಯಾಗಿತ್ತು. ಕೇಂದ್ರಕ್ಕೆ ಆಗಮಿಸಿದ ನಾಗಸಾಧುಗಳನ್ನು ಶ್ರೀ ಮೆಳೆಯಮ್ಮ ಆಧ್ಯಾತ್ಮಿಕ ಕೇಂದ್ರದ ಶ್ರೀ ಚಂದ್ರಶೇಖರ ಗುರೂಜಿಯವರು ಭಕ್ತಿಪೂರ್ವಕವಾಗಿ ಸ್ವಾಗತ ಕೋರಿ ಬರಮಾಡಿಕೊಂಡರು.

ಗ್ರಾಮದ ಜನರು ನಾಗಸಾಧುಗಳನ್ನು ನೋಡಲು ರಾತ್ರಿಯೇ ಆಧ್ಯಾತ್ಮಿಕ ಕೇಂದ್ರಕ್ಕೆ ಆಗಮಿಸಿಅವರ ಆಶೀರ್ವಾದ ಪಡೆದುಕೊಂಡರು. ಇಂದು ಆಧ್ಯಾತ್ಮಿಕ ಕೇಂದ್ರಕ್ಕೆ ಭೇಟಿ ನೀಡಿದ ಸುದ್ದಿಗಾರರಿಗೆ ಹಿಂದಿ ಭಾಷೆಯಲ್ಲಿ ಮಾತನಾಡಿದರು. ದೇಶದ ಜನರು ಕ್ಷೇಮಕ್ಕಾಗಿ. ಮಳೆ, ಬೆಳೆ ಚನ್ನಾಗಿ ಆಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ಎಲ್ಲಾ ಪುಣ್ಯಕ್ಷೇತ್ರಗಳನ್ನುದರ್ಶನ ಮಾಡಿಕೊಂಡು ಹೋಗುತ್ತಿದ್ದೇವೆ ಎಂದು ಹೇಳಿದರು.

Facebook Comments

Sri Raghav

Admin